ಸೌಲಭ್ಯ ಸದುಪಯೋಗಕ್ಕೆ ಸಲಹೆ

ITI.jpg
Published on

ದಾವಣಗೆರೆ : ವಿದ್ಯಾರ್ಥಿಗಳು ಕಾಲೇಜಿನ ಎಲ್ಲ ಸೌಕರ್ಯಗಳನ್ನು ಉತ್ತಮವಾಗಿ ಬಳಸಿಕೊಂದು ಶೈಕ್ಷಣಿಕ ಅಭಿವೃದ್ಧಿ ಹೊಂದಬೇಕು ಎಂದು ಮಹಾನಗರ ಪಾಲಿಕೆಯ ಉಪ ಮೇಯರ್ ಯಶೋದಾ ಯಗ್ಗಪ್ಪ ಹೇಳಿದರು.
 ನಗರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಶುಕ್ರವಾರ ಆಯೋಜಿಸಿದ್ದ ವಿದ್ಯಾರ್ಥಿ ಸಂಘ ಹಾಗೂ ಉಪಾಹಾರ ಗೃಹ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
 ವಿದ್ಯಾರ್ಥಿಗಳ ಕಲಿಕಾ ಸಮಯದಲ್ಲಿ ಮೂಲ ಸೌಕರ್ಯಗಳು ಅವಶ್ಯಕವಾಗಿ ಬೇಕು ಎಂದು ಅಭಿಪ್ರಾಯಪಟ್ಟರು.
 ಪಾಲಿಕೆ ಸದಸ್ಯ ಗೋಣೆಪ್ಪ ಮಾತನಾಡಿ ವಿದ್ಯಾರ್ಥಿಗಳಿಗೆ ಆರೋಗ್ಯ ಅತ್ಯಮೂಲ್ಯವಾಗಿದೆ. ಸ್ವಾಸ್ಥೃ ಸರಿಯಿದ್ದರೆ ಎಲ್ಲವನ್ನೂ ಸಾಧಿಸಬಹುದು. ಮಕ್ಕಳು ಉತ್ತಮ ಆಹಾರ, ನೀರು ಸೇವಿಸಬೇಕೆಂದು ಕಿವಿಮಾತು ಹೇಳಿದರು.
 ಪ್ರಾಚಾರ್ಯ ಎನ್. ಏಕನಾಥ ಪ್ರಾಸ್ತಾವಿಕ ಮಾತನಾಡಿದರು. ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ಜಿ.ಕೆ. ಜೀವನ್, ಆರ್. ಪುರುಷೋತ್ತಮ, ಸಿ.ಎಚ್. ಪ್ರವೀಣ್, ಪ್ರಿಯದರ್ಶಿನಿ ಮತ್ತು ಶಾಲಾ ಸಿಬ್ಬಂದಿ ಇದ್ದರು. ಮಾರುತೇಶ್ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net