ದಾವಣಗೆರೆಯಿಂದ ಜಿಲ್ಲಾ ಪ್ರವಾಸ ಕಾಕತಾಳೀಯ

arji.jpg
Published on

ದಾವಣಗೆರೆ : ಸಿದ್ದರಾಮಯ್ಯ ಅವರಿಗೆ ದಾವಣಗೆರೆ ಅದೃಷ್ಟದ ನೆಲ. ಕಳೆದ ವರ್ಷ ಆ. 3 ರಂದು ಇಲ್ಲಿ ನಡೆದ ‘ಸಿದ್ದರಾಮೋತ್ಸವ’ಕ್ಕೆ ಲಕ್ಷಾಂತರ ಜನರು ಸೇರಿದ್ದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಯಾರು ಮುಖ್ಯಮಂತ್ರಿ ಆಗುತ್ತಾರೆ ಎನ್ನುವ ಚರ್ಚೆಗಳು ನಡೆಯುತ್ತಿದ್ದ ಸಂದರ್ಭದಲ್ಲಿ ದಾವಣಗೆರೆಯ ಕಾರ್ಯಕ್ರಮ ಅದ್ಭುತ ಯಶಸ್ಸು ಕಂಡಿತ್ತು.
 ಸಿಎಂ ಆದ ನಂತರ ಸಿದ್ದರಾಮಯ್ಯ ಅವರ ಜಿಲ್ಲಾ ಪ್ರವಾಸ ದಾವಣಗೆರೆಯಿಂದಲೇ ಆರಂಭವಾಗಿದ್ದು ಕಾಕತಾಳೀಯ.
 ಸೋಮವಾರ ಜಿಲ್ಲೆಗೆ ಆಗಮಿಸಿದ ಸಿದ್ದರಾಮಯ್ಯ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಕಳೆದ ವರ್ಷ ದಾವಣಗೆರೆಯಲ್ಲಿ ನಡೆದಿದ್ದ ಕಾರ್ಯಕ್ರಮವನ್ನು ನೆನಪಿಸಿಕೊಂಡರು.
 ಅದು ಸಿದ್ದರಾಮೋತ್ಸವ ಅಲ್ಲ, 75ನೇ ವರ್ಷದ ಜನ್ಮ ದಿನಾಚರಣೆ ಎಂದು ಸ್ಪಷ್ಟನೆ ನೀಡಿದ ಅವರು, ರಾಜ್ಯದ ಮಧ್ಯ ಭಾಗ ಎನ್ನುವ ಕಾರಣಕ್ಕೆ ಇಲ್ಲಿ ಆಯೋಜನೆ ಮಾಡಲಾಗಿತ್ತು. ನಾನು ಮುಖ್ಯಮಂತ್ರಿಯಾದ ನಂತರ ಮೊದಲ ಜಿಲ್ಲಾ ಪ್ರವಾಸಕ್ಕಾಗಿ ದಾವಣಗೆರೆಗೇ ಬಂದಿರುವುದು ಕಾಕತಾಳೀಯ ಎಂದು ಹೇಳಿದರು.
 ಹಾಗಾದರೆ ದಾವಣಗೆರೆಗೆ ವಿಶೇಷ ಕೊಡುಗೆ ಏನಾದರೂ ಇದೆಯೆ ಎನ್ನುವ ಪ್ರಶ್ನೆಗೆ ಸ್ಪಷ್ಟವಾಗಿ ಏನನ್ನೂ ಹೇಳಲಿಲ್ಲ.
 ...

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net