ಸಹಿ ಸಂಗ್ರಹ ಅಭಿಯಾನ

dvg-citu-12.jpg
Published on

ದಾವಣಗೆರೆ : ಬೆಲೆ ಏರಿಕೆ ವಿರೋಧಿಸಿ, ಕಾರ್ಮಿಕ ಹಕ್ಕುಗಳ ರಕ್ಷಣೆ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ವತಿಯಿಂದ ನಗರದಲ್ಲಿ ಶುಕ್ರವಾರ ಸಹಿ ಸಂಗ್ರಹ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.
 ನಿಟ್ಟುವಳ್ಳಿ ದುರ್ಗಾಂಬಿಕಾ ದೇವಸ್ಥಾನದ ಹತ್ತಿರ ಸೇರಿದ ಸಂಘಟನೆಯ ಕಾರ್ಯಕರ್ತರು ಘೋಷಣೆಗಳನ್ನು ಕೂಗಿದರು.
 ಸಂವಿಧಾನದ ಮೌಲ್ಯಗಳ ರಕ್ಷಣೆಗಾಗಿ, ವಸತಿ ನಿವೇಶನಕ್ಕಾಗಿ, ಶೈಕ್ಷಣಿಕ ಧನ ಸಹಾಯ ಕಡಿತದ ವಿರುದ್ಧ, ಉಚಿತ ಶಿಕ್ಷಣ, ಆರೋಗ್ಯಕ್ಕಾಗಿ, ಸರ್ಕಾರಿ ಆಸ್ಪತ್ರೆಗಳ, ರೈಲ್ವೆ, ಬ್ಯಾಂಕ್, ವಿಮಾ, ವಿದ್ಯುತ್, ಶಿಕ್ಷಣ ಖಾಸಗೀಕರಣ ವಿರೋಧಿಸಿ ಮನೆ ಮನೆಗೆ ತೆರಳಿ ಸಹಿ ಸಂಗ್ರಹ ಮಾಡಲಾಯಿತು.
 ಸಂಘಟನೆಯ ಅಧ್ಯಕ್ಷ ಕೆ.ಎಚ್. ಆನಂದರಾಜು, ಶ್ರೀನಿವಾಸ ಮೂರ್ತಿ, ಹೆಗ್ಗೆರೆ ರಂಗಪ್ಪ, ಶ್ರೀನಿವಾಸ್, ನೇತ್ರಾವತಿ, ರಕ್ಷಿತಾ, ಜಬೀವುಲ್ಲಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net