ನಮೋ ಭೂತಾತ್ಮ -2 ಚಿತ್ರ ಯಶಸ್ವಿ ಪ್ರದರ್ಶನ

IMG-20230809-WA0083.jpg
Published on

ದಾವಣಗೆರೆ : ಹಾರರ್ ಜತೆಗೆ ಹ್ಯೂಮರ್ ಕಥಾ ಹಂದರದ ನಮೋ ಭೂತಾತ್ಮ -2 ಚಿತ್ರವು ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ ಎಂದು ಚಿತ್ರದ ನಾಯಕ ಕೋಮಲ್ ಹೇಳಿದರು.
 ರಾಜ್ಯದ ಸುಮಾರು 109 ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಗೊಂಡಿದೆ. ಎಲ್ಲ ಕಡೆ ಕುಟುಂಬ ಸಮೇತ ಪ್ರೇಕ್ಷಕರು ವೀಕ್ಷಿಸುತ್ತಿದ್ದು ಉತ್ತಮ ಪ್ರತಿಕ್ರಿಯೆ ಕಂಡುಬಂದಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
 ಗೋವಿಂದಾಯ ನಮಃ ಚಿತ್ರದ ಫ್ಯಾರ್‌ಗೆ ಆಗ್ಬಿಟೈತೆ ಹಾಡಿನ ಕೋರಿಯಾಗ್ರಾಫರ್ ಮುರಳಿ  ನಿರ್ದೇಶನ ಮಾಡಿದ್ದಾರೆ. ನಾಯಕನಾಗಿ ಇದು ನಾನು ಅಭಿನಯಿಸಿದ 47ನೇ ಚಿತ್ರವಾಗಿದೆ. ದಾವಣಗೆರೆಯಲ್ಲಿ ತಮ್ಮ ಚಿತ್ರಗಳಿಗೆ ಉತ್ತಮ ಪ್ರೋತ್ಸಾಹ ನೀಡುತ್ತಿದ್ದು ಇಲ್ಲಿಂದಲೇ ಚಿತ್ರದ ಪ್ರಮೋಶನ್ ಪ್ರಾರಂಭಿಸಿರುವುದಾಗಿ ಹೇಳಿದರು.
 ಭೂತ ಎನ್ನುವುದು ನೆಗೆಟಿವ್ ಮತ್ತು ಪಾಸಿಟಿವ್ ಎರಡೂ ಇದ್ದಂತೆ. ನಾವು ಹೇಗೆ ಪ್ರತಿಕ್ರಿಯಿಸುತ್ತೇವೋ ಅದರ ಮೇಲೆ ಹೋಗುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
 ಚಿತ್ರದ ನಿರ್ದೇಶಕ ಮುರಳಿ ಮಾತನಾಡಿ, ನಮೋ ಭೂತಾತ್ಮ ಸಿನಿಮಾ 2ನೇ ವಾರದತ್ತ ಮುನ್ನಡೆದಿದೆ. ಚಿತ್ರದಲ್ಲಿ ನಾಲ್ಕು ಹಾಡುಗಳಿವೆ. ಹಾರರ್ ಕಥಾ ಹಂದರದ ಸಿನಿಮಾವನ್ನು ಹಗಲು ರಾತ್ರಿ ಚಿತ್ರೀಕರಿಸಿ ಒಂದೇ ಶೆಡ್ಯೂಲ್‌ನಲ್ಲಿ ಮುಗಿಸಲಾಗಿದೆ ಎಂದು ತಿಳಿಸಿದರು. ನಟ ಮಹಾಂತೇಶ್ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net