ವಿಶ್ವಚೇತನ ವಿದ್ಯಾನಿಕೇತನ ಶಾಲೆಗೆ ಉತ್ತಮ ಫಲಿತಾಂಶ

dvg-B.G.-Khushi-vishwa-chetana.jpg
Published on

ದಾವಣಗೆರೆ : ಈ ಬಾರಿಯ ಸಿ.ಬಿ.ಎಸ್.ಸಿ 10ನೇ ತರಗತಿ ಪರೀಕ್ಷೆಯಲ್ಲಿ ನಗರದ ವಿಶ್ವಚೇತನ ವಿದ್ಯಾನಿಕೇತನ ವಸತಿಯುತ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್‌ನ ವಿದ್ಯಾರ್ಥಿನಿ ಬಿ.ಜಿ. ಖುಷಿ 500 ಕ್ಕೆ 480 ಅಂಕಗಳನ್ನು ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ.  ಕೆ.ಜಿ. ನಚಿಕೇತ್ ಗೌಡ 479 (ದ್ವಿತೀಯ) ಮತ್ತು ಪಿ.ಬಿ. ಶುಭಾ 478 ಅಂಕಗಳೊಂದಿಗೆ ತೃತಿಯ ಸ್ಥಾನವನ್ನು ಗಳಿಸಿದ್ದಾರೆ.  ಎಚ್.ಎಸ್. ಸಹನಾ 474, ಎಂ.ಎಸ್. ದಿಗಂತ್ 472, ಆರ್.ಕೆ. ಸಮೀಕ್ಷಾ 468 ಹಾಗೂ ಇನ್ನೂ ಅನೇಕ ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಪಡೆದಿದ್ದಾರೆ.  ವಿದ್ಯಾರ್ಥಿಗಳ ಸಾಧನೆಯ ಬಗ್ಗೆ ಸಂಸ್ಥೆಯ ಕಾರ್ಯದರ್ಶಿ ಡಾ. ವಿಜಯಲಕ್ಷ್ಮೀ ವೀರಮಾಚನೇನಿ, ಪ್ರಾಚಾರ್ಯರು, ಆಡಳಿತ ಮಂಡಳಿ ಹಾಗೂ ಬೋಧಕ, ಬೋಧಕೇತರ ವರ್ಗದವರು ಹರ್ಷ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net