ಚಿರತೆ ದಾಳಿ, 20 ಕುರಿಗಳ ಸಾವು

Cheeta-attack.jpg
Published on

ದಾವಣಗೆರೆ  : ಹರಿಹರ ತಾಲೂಕು ಯಲವಟ್ಟಿ ಗ್ರಾಮದ ಸಮೀಪ ಮಂಗಳವಾರ ರಾತ್ರಿ ಎರಡು ಚಿರತೆಗಳು ನಡೆಸಿದ ದಾಳಿಯಲ್ಲಿ 20 ಕುರಿಗಳು ಮೃತಪಟ್ಟಿದ್ದು 9 ಕುರಿಗಳಿಗೆ ಗಾಯಗಳಾಗಿವೆ.  ಬೆಳಗಾವಿ ಜಿಲ್ಲೆಯ ಕುರಿಗಾಹಿಗಳು ಗ್ರಾಮದ ಹೊರ ವಲಯದಲ್ಲಿ 130 ಕುರಿಗಳ ಹಿಂಡಿನೊಂದಿಗೆ ತಂಗಿದ್ದರು. ರಾತ್ರಿ ಎರಡು ಚಿರತೆಗಳು ಕುರಿ ಹಿಂಡಿನ ಮೇಲೆ ಎರಗಿವೆ. ಮೃತಪಟ್ಟವುಗಳಲ್ಲಿ 5 ಮರಿಗಳೂ ಇದ್ದವು.  ಕುರಿಗಳು ಕಿರುಚುವುದು, ನಾಯಿಗಳು ಬೊಗಳುವ ಸದ್ದು ಕೇಳಿ ಕುರಿಗಾಹಿಗಳು ಎಚ್ಚರಗೊಂಡು ಚಿರತೆಗಳನ್ನು ಓಡಿಸಿದ್ದಾರೆ. ಉಪ ವಿಭಾಗಾಧಿಕಾರಿ ಸಂತೋಷ್ ಕುಮಾರ್, ತಹಸೀಲ್ದಾರ್ ಗುರುಬಸವರಾಜ, ಆರ್‌ಎಫ್‌ಒ ಷಣ್ಮುಖ ಮತ್ತು ಸಿಬ್ಬಂದಿ, ಉಪ ತಹಸೀಲ್ದಾರ್ ಆರ್. ರವಿ, ರಾಜಸ್ವ ನಿರೀಕ್ಷಕ ಅಣ್ಣಪ್ಪ, ಗ್ರಾಮ ಆಡಳಿತಾಧಿಕಾರಿ ಷರೀಫ್ ಸ್ಥಳಕ್ಕೆ ಭೇಟಿ ನೀಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net