ಚಂದ್ರಯಾನದ ಸಾಧನೆ ವಿವರಿಸಿದ ವಿಜ್ಞಾನಿ

scientist.jpg
Published on

ದಾವಣಗೆರೆ : ಇಸ್ರೋ ಹಿರಿಯ ವಿಜ್ಞಾನಿ ಡಾ.ಬಿ.ಎಚ್.ಎಂ. ದಾರುಕೇಶ ನಗರದ ಜೈನ್ ತಾಂತ್ರಿಕ ಮಹಾವಿದ್ಯಾಲಯಕ್ಕೆ ಶನಿವಾರ ಭೇಟಿ ನೀಡಿದ್ದರು.
 ಅವರು ಇಸ್ರೋದ ಚಂದ್ರಯಾನ-3 ಹಾಗೂ ಆದಿತ್ಯ-ಎಲ್1 ಸಾಧನೆಗಳ ಕುರಿತು ವಿದ್ಯಾರ್ಥಿಗಳೂಂದಿಗೆ ಹಾಗೂ ಪ್ರಾಧ್ಯಾಪಕರ ಜತೆ ಹಂಚಿಕೊಂಡರು. ಈ ವೇಳೆ ವಿಜ್ಞಾನ ಹಾಗೂ ತಾಂತ್ರಿಕ ವಿಷಯಗಳ ಬಗ್ಗೆ ಚರ್ಚೆಗಳು ನಡೆದವು. ಕಾಲೇಜು ವತಿಯಿಂದ ಅವರನ್ನು ಸನ್ಮಾನಿಸಲಾಯಿತು.
 ಪ್ರಾಚಾರ್ಯ ಡಾ. ಗಣೇಶ್ ಡಿ.ಬಿ, ಸಲಹೆಗಾರ ಡಾ. ಮಂಜಪ್ಪ ಸಾರಥಿ, ಸಂಚಾಲಕರಾದ ಪ್ರೊ.ನಟರಾಜ.ಜಿ ಹಾಗೂ ಶಿವರಾಜ್ ಇದ್ದರು.
 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net