ಶಿವಮೊಗ್ಗದ ಆಚಾರ್ಯ ತುಳಸಿ ಕಾಲೇಜಿಗೆ ಪ್ರಶಸ್ತಿ

dvg-octagan-22.jpg
Published on

ದಾವಣಗೆರೆ: ನಗರದ ಬಾಪೂಜಿ ಎಂಬಿಎ ಕಾಲೇಜಿನಲ್ಲಿ ಶುಕ್ರವಾರ ಸಂಜೆ ಮುಕ್ತಾಯವಾದ ರಾಜ್ಯಮಟ್ಟದ ಅಂತರ್ ಕಾಲೇಜು ಯುವೋತ್ಸವ ‘ಆಕ್ಟಾಗನ್ 2024’ ನಲ್ಲಿ ಶಿವಮೊಗ್ಗದ ಆಚಾರ್ಯ ತುಳಸಿ ನ್ಯಾಷನಲ್ ಕಾಲೇಜು ತಂಡ ಚಾಂಪಿಯನ್‌ಷಿಪ್ ಪಡೆಯಿತು.

ಶಿವಮೊಗ್ಗದ ಎನ್‌ಇಎಸ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್‌ಡ ಸ್ಟಡೀಸ್ ತಂಡವು ರನ್ನರ್‌ಅಪ್ ಆಯಿತು.

ಉತ್ಸವದ ಸಮಾರೋಪ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಬಾಪೂಜಿ ಮ್ಯಾನೇಜ್ಮೆಂಟ್ ಕಾಲೇಜಿನ ನಿರ್ದೇಶಕ ಡಾ.ಸ್ವಾಮಿ ತ್ರಿಭುವನಾನಂದ ಮಾತನಾಡಿ, ಪಠ್ಯಕ್ಕೆ ಪೂರಕವಾದ ಪ್ರಾಯೋಗಿಕ ಜ್ಞಾನವು ಸ್ಪರ್ಧಾತ್ಮಕ ಚಟುವಟಿಕೆಗಳಲ್ಲಿ ಸ್ವಯಂ ಮನದಟ್ಟಾಗುತ್ತದೆ ಎಂದು ಹೇಳಿದರು.

ಸ್ಪರ್ಧೆಯಲ್ಲಿ ಸ್ವಯಂ ಪ್ರೇರಣೆಯಿಂದ ತೊಡಗಿಕೊಳ್ಳುವ ವಿದ್ಯಾರ್ಥಿಗಳು ವಸ್ತುಸ್ಥಿತಿ ಹಾಗೂ ಅದರಲ್ಲಿ ತಾವು ವ್ಯವಹರಿಸಬೇಕಾದ ಚಾಕಚಕ್ಯತೆಯನ್ನು ಅನುಭವವಾಗಿ ಪಡೆಯುತ್ತಾರೆ ಎಂದು ಅಭಿಪ್ರಾಯಪಟ್ಟರು.

ವಿಭಾಗ ಮುಖ್ಯಸ್ಥ ಡಾ.ಎಸ್.ಎಚ್. ಸುಜಿತ್ ಕುಮಾರ್, ಡಾ. ಶ್ರುತಿ ಮಾಕನೂರು, ಸರೋಜಾ ಪಾಲ್ಗೊಂಡಿದ್ದರು. ದಿವ್ಯಾ ಮತ್ತು ಪರಶುರಾಮ್ ಕಾರ್ಯಕ್ರಮ ನಿರೂಪಿಸಿದರು. ಡಾ. ಪ್ರಕಾಶ್ ಅಳಲಗೇರಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net