ಜಿಲ್ಲಾದ್ಯಂತ ರಂಜಾನ್ ಹಬ್ಬದ ಆಚರಣೆ

dvg-ramjan.jpg
Published on

ದಾವಣಗೆರೆ : ಜಿಲ್ಲಾದ್ಯಂತ ಸೋಮವಾರ ಮುಸ್ಲಿಮರು ರಂಜಾನ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.  ಹಬ್ಬದ ಅಂಗವಾಗಿ ನಗರದ ಹಳೇ ಪಿಬಿ ರಸ್ತೆಯ ಈದ್ಗಾ, ರಜಾ-ವುಲ್-ಮುಸ್ತಫಾ ನಗರದ ಹೊಸ ಈದ್ಗಾ ಮತ್ತು ಎಸ್‌ಒಜಿ ಕಾಲನಿಯ ಈದ್ಗಾದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ಅಲ್ಲದೇ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ನಡೆಯಿತು.  ಹಬ್ಬದಲ್ಲಿ ಭಾಗಿಯಾದವರು ಶುಭಾಶಯ ವಿನಿಮಯ ಮಾಡಿಕೊಂಡರು. ಬಡವರಿಗೆ, ಅಶಕ್ತರಿಗೆ ದಾನ ಮಾಡಲಾಯಿತು. ಮಕ್ಕಳು ಹೊಸ ಬಟ್ಟೆ ಧರಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net