ದಾವಣಗೆರೆಯಲ್ಲಿ ವಿಜಯೋತ್ಸವ ಆಚರಣೆ

dvg-madiga-samaja-2.jpg
Published on

ದಲಿತ ಮುಖಂಡರಾದ ಎಚ್. ಮಲ್ಲೇಶ್, ಎಂ. ಹಾಲೇಶ್, ಶಾಮನೂರು ರಾಜು, ಜಯಪ್ರಕಾಶ್, ಹಾಲೇಶ್ ಜಿಗಳಿ, ಹನುಮಂತಪ್ಪ ಗಾಂಧಿನಗರ, ಅಂಜಿನಪ್ಪ, ರಾಜಪ್ಪ, ದುರ್ಗೇಶ್ ನಿಟ್ಟುವಳ್ಳಿ, ಆನಂದ ಜಾಲಿಹಾಳ್, ನಿಂಗರಾಜ್ ರೆಡ್ಡಿ, ಸಾವಜ್ಜರ್ ಮಂಜು, ಷಣ್ಮುಖ, ಸೋಮ್ಲಾಪುರ ಹನುಮಂತಪ್ಪ, ರಾಮಚಂದ್ರಪ್ಪ, ರಾಘವೇಂದ್ರ, ರವಿ ಕೆಟಿಜೆ ನಗರ, ಮಾನು, ಚೇತನ್, ಜಯಣ್ಣ ಎಸ್.ಒ.ಜಿ. ಕಾಲನಿ, ಚಿಕ್ಕನಹಳ್ಳಿ ಹನುಮಂತಪ್ಪ ಪಾಲ್ಗೊಂಡಿದ್ದರು.

ಈ ಹಿನ್ನೆಲೆಯಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರವು ನ್ಯಾಯಾಲಯದ ಆದೇಶವನ್ನು ತಕ್ಷಣ ಪುರಸ್ಕರಿಸಿ ಎಲ್ಲ ಇಲಾಖೆಗೂ ಆದೇಶವನ್ನು ಕಳಿಸುವಂತೆ ಒತ್ತಾಯಿಸಿದರು.

ಸುಪ್ರೀಂ ಕೋರ್ಟ್‌ನ 7 ನ್ಯಾಯಾಧೀಶರ ಪೀಠವು ಒಳ ಮೀಸಲಾತಿಯನ್ನು ಜಾತಿ ಜನಸಂಖ್ಯೆಗೆ ಅನುಗುಣವಾಗಿ ಹಂಚಿಕೆ ಮಾಡಬಹುದೆಂದು ಐತಿಹಾಸಿಕ ತೀರ್ಪನ್ನು ನೀಡಿದ್ದು ಮಾದಿಗ ಸಮಾಜ ನಡೆಸಿದ ಹೋರಾಟಕ್ಕೆ ಸಿಕ್ಕ ಫಲವಾಗಿದೆ ಎಂದರು.

ಈ ಸಂದರ್ಭದಲ್ಲಿ ಮಾದಿಗ ಸಮಾಜದ ಮುಖಂಡ ಆಲೂರು ನಿಂಗರಾಜ್ ಮಾತನಾಡಿ, ರಾಜ್ಯದಲ್ಲಿ ಮಾದಿಗ ಸಮಾಜಕ್ಕೆ ಉದ್ಯೋಗ, ಸಾಮಾಜಿಕ, ಶೈಕ್ಷಣಿಕ ಹಾಗೂ ಇನ್ನಿತರೆ ಮೀಸಲಾತಿ ಸವಲತ್ತನ್ನು ಜಾತಿ ಜನಸಂಖ್ಯೆಗೆ ಅನುಗುಣವಾಗಿ (ಒಳಮೀಸಲಾತಿ) ಜಾರಿ ಮಾಡುವಂತೆ ಈ ಹಿಂದೆ ಪ್ರೊ. ಬಿ. ಕೃಷ್ಣಪ್ಪ ಹೋರಾಟದ ಹಣತೆ ಹಚ್ಚಿದರು ಎಂದು ನೆನಪಿಸಿಕೊಂಡರು.

ಒಳ ಮೀಸಲಾತಿ ಜಾರಿ ಮಾಡುವಂತೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶ ಹಿನ್ನೆಲೆ ಮಾದಿಗ ಸಮಾಜದಿಂದ ಶುಕ್ರವಾರ ನಗರದ ಅಂಬೇಡ್ಕರ್ ವೃತ್ತದಲ್ಲಿ ಸಿಹಿ ಹಂಚಿ, ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಲಾಯಿತು.

ವಿಜಯವಾಣಿ ಸುದ್ದಿಜಾಲ ದಾವಣಗೆರೆ

ಮಾದಿಗ ಸಮಾಜದಿಂದ ವಿಜಯೋತ್ಸವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net