ನಾಡಹಬ್ಬ ದಸರಾಗೆ ಸಂಭ್ರಮದ ತೆರೆ

shami.jpg
Published on

ದಾವಣಗೆರೆ : ನಾಡಹಬ್ಬ ದಸರಾ ಮಹೋತ್ಸವಕ್ಕೆ ವಿಜಯ ದಶಮಿಯ ದಿನವಾದ ಮಂಗಳವಾರ ಸಂಭ್ರಮದ ತೆರೆ ಬಿದ್ದಿತು.
 ಹಬ್ಬದ ಅಂಗವಾಗಿ ಮಹಿಳೆಯರು ಬನ್ನಿ ವೃಕ್ಷಕ್ಕೆ ಪೂಜೆ ಸಲ್ಲಿಸಿದರು. ನಂತರ ಕುಟುಂಬದವರು, ಬಂಧು-ಬಾಂಧವರು, ಸ್ನೇಹಿತರೊಂದಿಗೆ ಬನ್ನಿ ವಿನಿಮಯ ಮಾಡಿಕೊಳ್ಳುವ ಮೂಲಕ ‘ಬಂಗಾರದಂತೆ ಇರೋಣ’ ಎಂದು ಸಂಕಲ್ಪ ಮಾಡಿದರು.
 ಮನೆ ಮನೆಗಳಲ್ಲಿ ಹಬ್ಬದ ಸಂಭ್ರಮವಿತ್ತು. ಬಾಗಿಲಿಗೆ ತೋರಣ ಕಟ್ಟಿ, ಹೂವುಗಳಿಂದ ಅಲಂಕರಿಸಲಾಗಿತ್ತು. ದೇವಸ್ಥಾನಗಳು ವಿಶೇಷ ಅಲಂಕಾರದೊಂದಿಗೆ ಕಳೆಗಟ್ಟಿದ್ದವು. ವಿಶೇಷ ಪೂಜೆಗಳು ನೆರವೇರಿದವು. ಭಕ್ತರು ದೇಗುಲಗಳಿಗೆ ಭೇಟಿ ನೀಡಿ ದರ್ಶನ ಪಡೆದರು. ಹಲವು ಅಂಗಡಿ, ಹೋಟೆಲ್‌ಗಳಿಗೆ ರಜೆ ಮಾಡಲಾಗಿತ್ತು.
 ನವದುರ್ಗೆಯರ ಆರಾಧನೆಯೊಂದಿಗೆ 9 ದಿನಗಳ ಕಾಲ ನವರಾತ್ರಿ ಉತ್ಸವ ವಿಜೃಂಭಣೆಯಿಂದ ನೆರವೇರಿತು. ಸೋಮವಾರ ಆಯುಧ ಪೂಜೆ ಅಂಗವಾಗಿ ವಾಹನಗಳನ್ನು ಶುಚಿಗೊಳಿಸಿ, ಹೂವುಗಳಿಂದ ಅಲಂಕರಿಸಿ ಪೂಜೆ ಮಾಡಲಾಯಿತು. ಕಾರ್ಖಾನೆಗಳು, ಮುದ್ರಣಾಲಯ, ಆಸ್ಪತ್ರೆ, ಅಂಗಡಿಗಳು ಹೀಗೆ ವಿವಿಧೆಡೆ ಆಚರಣೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net