1.75 ಲಕ್ಷ ರೂ. ಮೌಲ್ಯದ ಅಕ್ರಮ ಗಾಂಜಾ ವಶ

Crime_20250620231536535.jpg
Published on

ದಾವಣಗೆರೆ : ಶಿರಮಗೊಂಡನಹಳ್ಳಿ ಕಡೆ ಹೋಗುವ ಬ್ರಿಡ್ಜ್ನ ಪಕ್ಕದ ಸರ್ವೀಸ್ ರಸ್ತೆಯಲ್ಲಿ ಗುರುವಾರ ದಾಳಿ ನಡೆಸಿದ ಸಿ.ಇ.ಎನ್ ಠಾಣೆಯ ಪೊಲೀಸರು, ಇಬ್ಬರು ಆರೋಪಿಗಳನ್ನು ಬಂಧಿಸಿ 1.75 ಲಕ್ಷ ರೂ. ಮೌಲ್ಯದ 2 ಕೆಜಿ 360 ಗ್ರಾಂ. ಅಕ್ರಮ ಗಾಂಜಾ ವಶಪಡಿಸಿಕೊಂಡಿದ್ದಾರೆ.  ಚನ್ನಗಿರಿ ತಾಲೂಕಿನ ಮನೂರು ಅಲಿ ಮತ್ತು ಸಿ.ಕೆ. ಸಂಜಯ್ ಕುಮಾರ್ ಬಂಧಿತ ಆರೋಪಿಗಳು. ಇವರು ಅಕ್ರಮವಾಗಿ ಗಾಂಜಾ ಇಟ್ಟುಕೊಂಡು ದಾರಿಯಲ್ಲಿ ಹೋಗುವ, ಬರುವ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದರು ಎಂದು ದೂರಿನಲ್ಲಿ ಹೇಳಲಾಗಿದೆ.  ಸಿ.ಇ.ಎನ್ ಠಾಣೆಯ ಸಿ.ಪಿ.ಐ. ಎಚ್. ವಸಂತ, ಸಿಬ್ಬಂದಿ ಲೋಹಿತ್, ಮಲ್ಲಿಕಾರ್ಜುನ ಹಾದಿಮನಿ, ಅಶೋಕ, ಮುತ್ತುರಾಜ್, ಯೋಗೇಶ್ ನಾಯ್ಡು, ಎಸ್. ಬುಡೇನ್ ವಲಿ ಇತರರು ಕಾರ್ಯಾಚರಣೆ ನಡೆಸಿದರು.    

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net