ದಾಖಲೆ ಇಲ್ಲದೆ ಸಾಗಾಟ, 2.80 ಲಕ್ಷ ರೂ. ಹಣ ವಶ

IMG-20230411-WA0033-1.webp
Published on

ದಾವಣಗೆರೆ : ಮಹಿಳೆಯೊಬ್ಬರು ದಾಖಲೆ ಇಲ್ಲದೆ ತೆಗೆದುಕೊಂಡು ಹೊರಟಿದ್ದ 2.80 ಲಕ್ಷ ರೂ. ನಗದನ್ನು ಜಗಳೂರು ತಾಲೂಕು ಮುಸ್ಟೂರು ಗ್ರಾಮದ ಚೆಕ್‌ಪೋಸ್ಟ್‌ನಲ್ಲಿ ಮಂಗಳವಾರ ಬೆಳಗ್ಗೆ ಅಧಿಕಾರಿಗಳು ಮತ್ತು ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ.
 ಸ್ವಸಹಾಯ ಸಂಘದ ಕಾರ್ಯಕರ್ತೆ ಭಾಗ್ಯಮ್ಮ ಎಂಬುವರು ದ್ವಿಚಕ್ರ ವಾಹನದಲ್ಲಿ ದೊಣ್ಣೆಹಳ್ಳಿಯಿಂದ ಮುಸ್ಟೂರಿನ ಕಡೆಗೆ ಹೊರಟಿದ್ದಾಗ ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ ಮಾಡಲಾಗಿದ್ದು ಅಲ್ಲಿ ಹಣವಿರುವುದು ಪತ್ತೆಯಾಗಿದೆ.
 ಅಧಿಕಾರಿಗಳು ಪ್ರಶ್ನಿಸಿದಾಗ, ಆ ಹಣವು ಸ್ವಸಹಾಯ ಸಂಘಕ್ಕೆ ಸಂಬಂಧಿಸಿದ್ದು ಎಂದು ಭಾಗ್ಯಮ್ಮ ತಿಳಿಸಿದ್ದಾರೆ. ಆದರೆ ಸಂಬಂಧಿಸಿದ ಯಾವುದೇ ದಾಖಲೆಗಳನ್ನು ಅವರು ಒದಗಿಸಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net