ದವನ್ ಕಾರ್ನಿವಲ್ನಲ್ಲಿ ವಿದ್ಯಾರ್ಥಿಗಳ ಕಲರವ

dvg-davan.jpg
Published on

ದಾವಣಗೆರೆ :  ದವನ್ ಇನ್ಸ್‌ಟಿಟ್ಯೂಟ್ ಆಫ್ ಅಡ್ವಾನ್ಸ್‌ಡ ಮ್ಯಾನೇಜ್ಮೆಂಟ್ ಸ್ಟಡೀಸ್ ಮತ್ತು ನೂತನ್ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ನಗರದ ಬಾಪೂಜಿ ಬ್ಯಾಂಕ್ ಸಮುದಾಯ ಭವನದ ಆವರಣದಲ್ಲಿ ಸೋಮವಾರ, ದವನ್ ಕಾರ್ನಿವಲ್-2025 ಆಹಾರಮೇಳವನ್ನು ಆಯೋಜಿಸಲಾಗಿತ್ತು.  ಅಲ್ಲಿ ಆಹಾರ ಮತ್ತು ಗೇಮ್‌ಗಳ 14 ಮಳಿಗೆಗಳನ್ನು ವ್ಯವಸ್ಥೆಗೊಳಿಸಲಾಗಿತ್ತು. ಚೈನೀಸ್, ರಾಜಸ್ಥಾನಿ, ಹಳ್ಳಿ ರುಚಿ, ರೈತ ಸವಿರುಚಿ ಹೀಗೆ ಬಗೆ ಬಗೆಯ ಖಾದ್ಯಗಳು ಅಲ್ಲಿದ್ದವು.  ಪ್ರತಿ ವಿದ್ಯಾರ್ಥಿ 200 ಟಿಕೆಟ್‌ನಂತೆ 3 ಸಾವಿರಕ್ಕೂ ಹೆಚ್ಚು ಟಿಕೆಟ್‌ಗಳನ್ನು ಮಾರಾಟ ಮಾಡಿದ್ದರು. ವಿದ್ಯಾರ್ಥಿಗಳೇ ಹಣ ಹೂಡಿಕೆ ಮಾಡಿ ಮಳಿಗೆಯ ಬಾಡಿಗೆ ಕಟ್ಟಿ, ಮಾರಾಟ ಮಾಡುವುದು ಹೇಗೆ, ಲಾಭ ಗಳಿಸುವುದು ಹೇಗೆ, ಬ್ಯಾಲೆನ್ಸ್ ಶೀಟ್ ನಿರ್ವಹಣೆ ಹೀಗೆ ಹಲವು ವಿಚಾರಗಳ ಬಗ್ಗೆ ಪ್ರಾಯೋಗಿಕವಾಗಿ ಅನುಭವ ಪಡೆದರು. ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿತ್ತು.  ದವನ್-ನೂತನ್ ಕಾಲೇಜು ಕಾರ್ಯದರ್ಶಿ ವೀರೇಶ್ ಪಾಟೀಲ್ ಮಾತನಾಡಿ, ಮಕ್ಕಳಿಗೆ ಓದಿನ ಜತೆಗೆ ವ್ಯವಹಾರದ ಕುರಿತು ಪ್ರಾಯೋಗಿಕ ಜ್ಞಾನ ನೀಡುವುದು ಈ ಮೇಳದ ಉದ್ದೇಶ ಎಂದರು.  ಸಂಸ್ಥೆಯ ನಿರ್ದೇಶಕ ಹರ್ಷರಾಜ್ ಗುಜ್ಜರ್, ಡಾ. ಜಿ.ಎಸ್. ಅಂಜು, ಬಿ.ಸಿ. ಶಂಕರ್, ಕೆ. ಆಕರ್ಷ್ ಹೆಗಡೆ, ನಿಕಿತ್ ಡಿ. ಶೆಟ್ಟಿ, ಆರ್. ಜ್ಯೋತಿ ಸ್ವರೂಪ್, ಪ್ರೊ. ಎನ್.ಅನಿತಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net