

ದಾವಣಗೆರೆ : ಜಿಲ್ಲಾ ಪೊಲೀಸ್ ಕಚೇರಿಯ ಗೇಟಿನ ಬಳಿ ಮಂಗಳವಾರ ಮಹಿಳೆಯೊಬ್ಬರು ಆಕಸ್ಮಿಕವಾಗಿ ಎಸೆದ ಸಣ್ಣ ಕಲ್ಲು ಎಸ್ಪಿ ಉಮಾ ಪ್ರಶಾಂತ್ ಅವರ ಕಾರಿನ ಗಾಜಿಗೆ ತಾಗಿದ ಘಟನೆ ನಡೆದಿದೆ. ಆಗ ಕಾರಿನಲ್ಲಿ ಎಸ್ಪಿ ಇರಲಿಲ್ಲ. ಕಾರು ಕಚೇರಿಯ ಆವರಣದಿಂದ ಹೊರಗಡೆ ಹೋಗುವಾಗ ಗೇಟಿನ ಬಳಿ ನಿಂತಿದ್ದ ಮಹಿಳೆಯು ಕಲ್ಲು ಎಸೆದಿದ್ದಾಳೆ. ಇದಕ್ಕೆ ಕಾರಣ ತಿಳಿದು ಬಂದಿಲ್ಲ. ಈ ಕುರಿತು ಪೊಲೀಸ್ ಇಲಾಖೆಯು ಸ್ಪಷ್ಟನೆ ನೀಡಿದೆ. ಮಧ್ಯಾಹ್ನ ಜಿಲ್ಲಾ ಪೊಲೀಸ್ ಕಚೇರಿಯ ಗೇಟಿನ ಬಳಿ ಎಸ್ಪಿ ಅವರ ಕಾರು (ಆಗ ಕಾರಿನಲ್ಲಿ ಎಸ್ಪಿ ಇರಲಿಲ್ಲ) ಹೊರಗಡೆ ಹೋಗುತ್ತಿರುವಾಗ ಗೇಟಿನ ಬಳಿ ನಿಂತಿದ್ದ ಮಹಿಳೆಯು ತನ್ನ ಕೈಯಲ್ಲಿದ್ದ ಸಣ್ಣ ಕಲ್ಲಿನಿಂದ ಕಾರಿನ ಗಾಜಿಗೆ ತಾಗಿಸಿದ್ದು ಕಾರಿಗೆ ಯಾವುದೇ ತೊಂದರೆ ಆಗಿಲ್ಲ ಎಂದು ತಿಳಿಸಲಾಗಿದೆ.