ಕುಡಿದ ಮತ್ತಿನಲ್ಲಿ ಚಾಲನೆ, ಕಾರುಗಳು ಜಖಂ

dvg-car-30.jpg
Published on

ದಾವಣಗೆರೆ : ನಗರದ ಹೊರವಲಯದ ಆವರಗೆರೆಯ ಶೋ ರೂಂ ಒಂದರ ಬಳಿ ಗುರುವಾರ ಕುಡಿದ ಮತ್ತಿನಲ್ಲಿ ಚಾಲಕನೊಬ್ಬ ಟ್ರ್ಯಾಕ್ಟರ್ ಡಿಕ್ಕಿ ಹೊಡೆಸಿ 5 ಕಾರುಗಳನ್ನು ಜಖಂಗೊಳಿಸಿದ್ದಾನೆ.
 ಕುಡಿದ ಮತ್ತಿನಲ್ಲಿ ಅಡ್ಡಾದಿಡ್ಡಿಯಾಗಿ ಟ್ರ್ಯಾಕ್ಟರ್ ಚಲಾಯಿಸಿದ್ದರಿಂದ ಶೋ ರೂಂಗೆ ಸರ್ವೀಸ್‌ಗೆ ಬಂದಿದ್ದ 5 ಕಾರುಗಳಿಗೆ ಹಾನಿಯಾಗಿದೆ.
 ಸರ್ವೀಸ್ ಮಾಡಿಸಲು ಮಾಲೀಕರು ಶೋ ರೂಂ ಮುಂದೆ ಕಾರುಗಳನ್ನು ನಿಲ್ಲಿಸಿದ್ದಾಗ ಈ ಘಟನೆ ನಡೆದಿದೆ. ಈ ಬಗ್ಗೆ ದೂರು ದಾಖಲಾಗಿಲ್ಲ.
 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net