ಚನ್ನಗಿರಿ ಬಸ್ ಡಿಪೋ ಉದ್ಘಾಟನೆಗೆ ಮನವಿ

dvg-bus-depot.jpg
Published on

ದಾವಣಗೆರೆ  : ಚನ್ನಗಿರಿಯಲ್ಲಿ ನೂತನವಾಗಿ ನಿರ್ಮಿಸಿರುವ ಸರ್ಕಾರಿ ಬಸ್ ಡಿಪೋವನ್ನು ತುರ್ತಾಗಿ ಆರಂಭಿಸಬೇಕು ಎಂದು ದೊಡ್ಡಘಟ್ಟ ಗ್ರಾಮದ ಸಮಾಜಸೇವಕ ಎಸ್. ರಂಗಸ್ವಾಮಿ ಆಗ್ರಹಿಸಿದರು.  ಈ ಕುರಿತು ಅವರು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.  ಬಸ್ ಡಿಪೋ ಕುರಿತು ಸಿಎಂ, ಜಿಲ್ಲಾ ಸಚಿವರಿಗೆ, ಶಾಸಕರಿಗೆ ಈಗಾಗಲೇ ಮನವಿ ಸಲ್ಲಿಸಿದ್ದೇವೆ. ಡಿಪೋ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಆದರೆ ಇದುವರೆಗೂ ಉದ್ಘಾಟನೆಯಾಗಿಲ್ಲ ಎಂದು ಮನವಿಯಲ್ಲಿ ತಿಳಿಸಿದ್ದಾರೆ.  ಘಟಕಕ್ಕೆ ತಾತ್ಕಾಲಿಕವಾಗಿ 207 ಸಿಬ್ಬಂದಿಯನ್ನು ನಿಯೋಜನೆ ಮಾಡಿದ್ದಾರೆ. ಡೀಸೆಲ್ ಸಹ ಬಂದಿದೆ ಎಂದು ಅವರು ಹೇಳಿದ್ದಾರೆ.    

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net