ನವಿಲೇಹಾಳ್ ಗ್ರಾಮಕ್ಕೆ ನೂತನ ಬಸ್ ಸೌಲಭ್ಯ

dvg-bus-07.jpg
Published on

ದಾವಣಗೆರೆ : ದಾವಣಗೆರೆಯಿಂದ ನವಿಲೇಹಾಳ್ ಗ್ರಾಮಕ್ಕೆ ಸೋಮವಾರದಿಂದ ಕೆ.ಎಸ್.ಆರ್.ಟಿ.ಸಿಯ ನೂತನ ಬಸ್ ಸೌಲಭ್ಯ ಕಲ್ಪಿಸಲಾಗಿದೆ.
 ಈ ಬಸ್ ಪ್ರತಿ ದಿನ ದಾವಣಗೆರೆಯಿಂದ ಮಧ್ಯಾಹ್ನ 3.40ಕ್ಕೆ ಬಿಟ್ಟು ನವಿಲೇಹಾಳ್‌ಗೆ 4.30ಕ್ಕೆ ತಲುಪಿ, 4.40ಕ್ಕೆ ನವಿಲೇಹಾಳ್‌ನಿಂದ ಹೊರಟು ದಾವಣಗೆರೆಗೆ 5.40ಕ್ಕೆ ಬರುತ್ತದೆ.
 ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಅವರು ಈ ಬಸ್ ಸೌಕರ್ಯ ಕಲ್ಪಿಸಿದ್ದು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಇದರಿಂದ ಅನುಕೂಲವಾಗಿದೆ.
 ನೂತನ ಬಸ್‌ಗೆ ನವಿಲೇಹಾಳ್ ಗ್ರಾಮದಲ್ಲಿ ಪೂಜೆ ಸಲ್ಲಿಸಲಾಯಿತು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಹನುಮಂತಪ್ಪ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಾಬು, ಗ್ರಾ.ಪಂ. ಸದಸ್ಯರು, ಗ್ರಾಮದ ಪ್ರಮುಖರು, ದೊಡ್ಡಘಟ್ಟ ಗ್ರಾಮದ ಸಮಾಜಸೇವಕ ರಂಗಸ್ವಾಮಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net