28ರಂದು ಬುದ್ಧ, ಬಸವ, ಅಂಬೇಡ್ಕರ್ ಜಯಂತಿ

IMG-20230526-WA0091.jpg
Published on

ದಾವಣಗೆರೆ: ಇಂಟರ್ ನ್ಯಾಷನಲ್ ಫ್ರೆಂಡ್ಸ್ ಆಫ್ ಬುದ್ಧಿಸ್ಟ್ ಸೋಷಿಯಲ್, ಎಜುಕೇಶನಲ್, ಕಲ್ಚರಲ್ ಆ್ಯಂಡ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಬುದ್ಧ, ಬಸವ, ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಸಮಾರಂಭ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಮೇ 28ರಂದು ಬೆಳಗ್ಗೆ 10.30ಕ್ಕೆ ನಗರದ ರೋಟರಿ ಬಾಲ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
 ಅದಕ್ಕೂ ಮೊದಲು ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಅಂಬೇಡ್ಕರ್ ವೃತ್ತದಿಂದ ರೋಟರಿ ಬಾಲ ಭವನದ ವರೆಗೆ ಕಾಲ್ನಡಿಗೆ ಜಾಥಾ ನಡೆಸಲಾಗುವುದು ಎಂದು, ಟ್ರಸ್ಟ್ ಅಧ್ಯಕ್ಷ ಡಿ.ಎನ್. ಹಾಲೇಶ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
 ವೇದಿಕೆ ಕಾರ್ಯಕ್ರಮವನ್ನು ಮೈಸೂರಿನ ಉರಿಲಿಂಗ ಪೆದ್ದಿ ಮಹಾಸಂಸ್ಥಾನದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಉದ್ಘಾಟಿಸುವರು. ಬೆಂಗಳೂರಿನ ಐಎನ್‌ಎಫ್‌ಬಿ ಟ್ರಸ್ಟ್‌ನ ಸಲಹೆಗಾರ ಡಾ.ಎಚ್.ಆರ್. ಸುರೇಂದ್ರ, ನಿವೃತ್ತ ಪ್ರಾಚಾರ್ಯ ಎ.ಬಿ. ರಾಮಚಂದ್ರಪ್ಪ, ಧಾರವಾಡದ ಎಫ್.ಎಚ್. ಜಕ್ಕಪ್ಪನವರ್, ಶಿವಮೊಗ್ಗದ ಡಿ.ಟಿ. ದೇವೇಂದ್ರನ್, ನಿವೃತ್ತ ಪ್ರಾಧ್ಯಾಪಕ ಡಾ.ಜಿ.ಟಿ. ಗೋವಿಂದಪ್ಪ ಉಪನ್ಯಾಸ ನೀಡುವರು ಎಂದರು.
 ಎ.ಬಿ. ರಾಮಚಂದ್ರಪ್ಪ ಸಂಪಾದಿಸಿರುವ ‘ಮಹಾ ಬೆಳಕು’ ಪುಸ್ತಕದ ಬಿಡುಗಡೆಯೂ ಕಾರ್ಯಕ್ರಮದಲ್ಲಿ ನೆರವೇರಲಿದೆ. ಜಿಲ್ಲೆಯ ಬುದ್ಧ, ಬಸವ, ಅಂಬೇಡ್ಕರ್ ಅಭಿಮಾನಿಗಳು ಭಾಗವಹಿಸಬೇಕು ಎಂದು ಮನವಿ ಮಾಡಿದರು.
 ರಾಜ್ಯದ ವಿವಿಧೆಡೆ ಇರುವ ರೀತಿಯಲ್ಲಿ ದಾವಣಗೆರೆಯಲ್ಲೂ ‘ಬುದ್ಧ ವಿಹಾರ’ವನ್ನು ಮಾಡಬೇಕು ಎಂಬ ಚಿಂತನೆಯಿದ್ದು ಪ್ರಯತ್ನಗಳು ಸಾಗಿವೆ ಎಂದು ತಿಳಿಸಿದರು.
 ಟ್ರಸ್ಟ್‌ನ ಆವರಗೆರೆ ರುದ್ರಮುನಿ, ಎಂ.ಎಸ್. ಕೃಷ್ಣ, ಎಚ್.ಕೆ. ಕೊಟ್ರೇಶ್, ಹನುಮಂತಯ್ಯ, ಚಿದಾನಂದ್ ಸುದ್ದಿಗೋಷ್ಠಿಯಲ್ಲಿದ್ದರು.
 ...
 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net