

ದಾವಣಗೆರೆ : ಖ್ಯಾತ ಜವಳಿ ಸಂಸ್ಥೆಯಾದ ಬಿ.ಎಸ್. ಚನ್ನಬಸಪ್ಪ ಆ್ಯಂಡ್ ಸನ್ಸ್‌ನ ಹೊಸ ಅಂಗಡಿ ‘ಬಿಎಸ್‌ಸಿ ಮೆನ್ಸ್ ಎಕ್ಸ್‌ಪ್ರೆಸ್’ ನಗರದ ರಿಂಗ್ ರಸ್ತೆಯಲ್ಲಿ ಶನಿವಾರ ಉದ್ಘಾಟನೆಯಾಯಿತು. ಕುಟುಂಬದ ಹಿರಿಯರ ಸಮ್ಮುಖದಲ್ಲಿ ಮನೆಯ ಮಹಾಲಕ್ಷ್ಮಿಯರು ಹಾಗೂ ಹಿರಿಯರಾದ ಬಿ.ಯು. ಗಿರಿಜಾ, ಬಿ.ಸಿ. ಪೂರ್ಣಿಮಾ, ಬಿ.ಎಸ್. ದೀಪಾ ಅವರು ಒಂದನೇ ಮಳಿಗೆಯನ್ನು ಉದ್ಘಾಟಿಸಿದರು. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಫ್ಯಾಷನ್ ವಸ್ತ್ರಗಳ ಭಂಡಾರ ಇಲ್ಲಿದೆ. ಪುರುಷರಿಗಾಗಿ ಕೈಗೆಟುಕುವ ಬೆಲೆಯಲ್ಲಿ ಬಟ್ಟೆಗಳು ದೊರೆಯುತ್ತವೆ. ಎಲ್ಲವೂ 999 ರೂ.ಗಿಂತ ಕಡಿಮೆ ಬೆಲೆಗೆ ಸಿಗುವುದು ವಿಶೇಷತೆಯಾಗಿದೆ. ಪುರುಷರ ಫಾರ್ಮಲ್ಸ್, ಕ್ಯಾಜ್ಯುಯಲ್ಸ್, ಫ್ಯಾಷನ್ ಉಡುಪುಗಳು, ಧೋತಿ, ಕುರ್ತಾ ಮತ್ತು ಆ್ಯಕ್ಸಸರೀಸ್ ಲಭ್ಯ. ಇದು ಕರ್ನಾಟಕಕ್ಕೆ ಮತ್ತು ಪ್ಯಾನ್-ಇಂಡಿಯಾಕ್ಕೆ ದಾವಣಗೆರೆಯಿಂದ ಹೊಸ ಬ್ರಾೃಂಡ್.