

ಚನ್ನಗಿರಿ : ದಾದಾ ಲೇಖರಾಜ ಬಾಬಾ ಅವರು ಪರಮಾತ್ಮನಾಗಿ ಲೋಕಕ್ಕೆ ಜ್ಞಾನಸ್ವಾದ ನೀಡುವ ಮೂಲಕ ಸಾಕ್ಷಾತ್ಕಾರವನ್ನು ಮಾಡಿದ್ದಾರೆ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ತಾರಾ ಅಕ್ಕ ತಿಳಿಸಿದರು. ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ದಾದಾ ಲೇಖರಾಜ ಬಾಬಾ ಅವರ ಸ್ಮತಿ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನರ ಮನಸ್ಸಿನಲ್ಲಿ ಬೆಳೆದು ನಿಂತಿದೆ. ಭಕ್ತರ ಸಹಕಾರದಿಂದ ಹೆಮ್ಮರವಾಗಿ ಬೆಳೆಯುತ್ತಿದೆ. ಹೆಚ್ಚಾಗಿ ಮಹಿಳೆಯರು ನಡೆಸುವ ಸಂಸ್ಥೆಯಾಗಿದ್ದು ಉತ್ತಮ ಜ್ಞಾನ ಮತ್ತು ಸಮಾಜವನ್ನು ನಿರ್ಮಿಸಲು ಶ್ರಮಿಸುತ್ತಿದೆ ಎಂದರು. ಮನುಷ್ಯನಲ್ಲಿ ಆಸೆ, ಸ್ವಾರ್ಥ ಮನೋಭಾವ ಬೆಳೆದಿದೆ. ಪರಮಾತ್ಮನ ಕಾಯಕಕ್ಕೆ ಮೀಸಲಾಗುವ ಮೂಲಕ ಪರಿವರ್ತನೆ ಹೊಂದಬೇಕು ಎಂದರು. ಪ್ರಜಾಪಿತ ಬ್ರಹ್ಮಕುಮಾರಿ ವಿದ್ಯಾಲಯದ ಸಂಚಾಲಕಿ ಮಹಾದೇವಿ, ಮಹಾಲಕ್ಷ್ಮೀ, ಜಯಶ್ರೀ ಇದ್ದರು.