ಸ್ಥಳೀಯ ಪ್ರಜ್ಞೆ ಕಟ್ಟಿ ಕೊಟ್ಟ ಲೇಖಕಿ ಟಿ. ಗಿರಿಜಾ

dvg-datti-karyakrama.jpg
Published on

ದಾವಣಗೆರೆ  : ಲೇಖಕಿ ಟಿ. ಗಿರಿಜಾ ಅವರು ಕ್ರಿಯಾಶೀಲತೆಯ ಸಂಕೇತವಾದ ಕಾದಂಬರಿ ರಚನೆಯ ಜತೆಗೆ ಸ್ಥಳೀಯ ಪ್ರಜ್ಞೆಯನ್ನು ಕಟ್ಟಿ ಕೊಟ್ಟಿದ್ದಾರೆ ಎಂದು ನಿವೃತ್ತ ಪ್ರಾಚಾರ್ಯ ಡಾ. ದಾದಾಪೀರ್ ನವಿಲೇಹಾಳ್ ಹೇಳಿದರು.  ಜಿಲ್ಲಾ ವನಿತಾ ಸಾಹಿತ್ಯ ವೇದಿಕೆ ಮತ್ತು ದಾವಣಗೆರೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ನಗರದ ಮಹಿಳಾ ಸಮಾಜ ಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಹಿರಿಯ ಸಾಹಿತಿ ದಿ. ಟಿ. ಗಿರಿಜಾ ಅವರ 11ನೇ ವರ್ಷದ ಸಂಸ್ಮರಣೆ ದತ್ತಿ ಉಪನ್ಯಾಸ ಹಾಗೂ ಲೇಖಕಿ ಕುಮುದಾ ಶಾಂತರಾಜ್ ಅವರ ‘ಶಾಕ್ಯಮುನಿ ಗೌತಮಬುದ್ಧ ಮತ್ತು ಆದಿಗುರು ಶ್ರೀ ಶಂಕರಾಚಾರ್ಯರು’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.  ಗಿರಿಜಾ ಅವರ ಕಾದಂಬರಿಗಳು ಮಹಿಳೆಯರ ಬದುಕು ಮತ್ತು ಬವಣೆಗಳ ಮೇಲೆ ಬೆಳಕು ಚೆಲ್ಲಿ, ಪುರುಷ ಸಮಾಜದ ಅಹಂಕಾರವನ್ನು ಗಟ್ಟಿಯಾಗಿ ಪ್ರಶ್ನಿಸುವ ದಾರಿ ತೋರಿಸುತ್ತವೆ ಎಂದು ಅಭಿಪ್ರಾಯಪಟ್ಟರು.  ಆಧುನಿಕ ಕನ್ನಡ ಸಾಹಿತ್ಯದಲ್ಲಿ ತ್ರಿವೇಣಿ, ಎಂ.ಕೆ. ಇಂದಿರಾ, ತಿರುಮಲಾಂಬ ಇವರೆಲ್ಲ ಕನ್ನಡ ಸಾಹಿತ್ಯದ ಆರಂಭದಲ್ಲಿ ಹೆಣ್ಣುಮಕ್ಕಳ ಸಮಸ್ಯೆಗಳ ಕುರಿತು ಮಾತನಾಡಿದವರು. ಪುರಾಣ, ಪುಣ್ಯಕತೆಗಳಲ್ಲಿ ಹೆಣ್ಣನ್ನು ಪೂಜಿಸಲಾಗಿದೆ. ಅಂತಹ ಸಂಸ್ಕೃತಿ, ಪರಂಪರೆಯಿಂದ ಬಂದ ನಾವಿಂದು ಹೆಣ್ಣು ಮಕ್ಕಳಿಗೆ ಭಾವನೆ, ಅಭಿರುಚಿ ಇಲ್ಲ ಎಂದೇ ನೋಡಿದ್ದೇವೆ. ಆದರೆ ಅಂತಹ ಎಲ್ಲ ಸಮಸ್ಯೆಗಳನ್ನು ಗಿರಿಜಾ ಅವರು ತಮ್ಮ ಸಾಮಾಜಿಕ ಕಾದಂಬರಿಗಳಲ್ಲಿ ಮತ್ತೆ ಮತ್ತೆ ಬಿಂಬಿಸಿದ್ದಾರೆ ಎಂದರು.  ...

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net