

ದಾವಣಗೆರೆ : ಕಲ್ಲು ತೂರಾಟ ಮಾಡುವವರನ್ನು ಬಿಟ್ಟು, ಹಿಂದುಗಳ ಮೇಲೆ ಕೇಸ್ ಹಾಕಿರುವುದು, ಹಿಂದುಗಳು ಫ್ಲೆಕ್ಸೃ್ ಹಾಕಿದರೆ ಒಳಗೆ ಹಾಕಿಸುತ್ತೇನೆ ಎನ್ನುವುದು ವಿಷಾದನೀಯ. ಇವರು ಕಣ್ಣಿಗೆ ಬಟ್ಟೆ ಕಟ್ಟಿಕೊಂಡಿದ್ದಾರೆಯೆ ಎಂದು, ಬಿಜೆಪಿ ಮುಖಂಡ ಜಿ.ಎಸ್. ಅನಿತ್ ಕುಮಾರ್, ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ವಾಗ್ದಾಳಿ ನಡೆಸಿದರು. ಮತಗಳಿಗಾಗಿ ಈ ರೀತಿ ಮಾಡುವುದು ಸರಿಯೆ?, ಅವರಿಗೆ ವೋಟ್ ತೆಗೆದುಕೊಳ್ಳುವುದು ಮಾತ್ರ ಕೆಲಸವೆ?, ವೋಟಿಗಾಗಿ ಏನು ಬೇಕಾದರೂ ಮಾಡುತ್ತಾರೆಯೆ?, ಕಲ್ಲು ತೂರಿದವರಿಂದ ಮಾತ್ರ ವೋಟ್ ತೆಗೆದುಕೊಳ್ಳುವರೆ. ಮುಂದಿನ ದಿನಗಳಲ್ಲಿ ಜನರೇ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.