ನಿರಾಣಿ ಜತೆ ಬಿಜೆಪಿ ಮುಖಂಡರ ಚರ್ಚೆ

dvg-siddeshwara.jpg
Published on

ದಾವಣಗೆರೆ : ನಗರದ ಜಿ.ಎಂ.ಐ.ಟಿ. ಅತಿಥಿ ಗೃಹದಲ್ಲಿ ಶನಿವಾರ, ರಾಜ್ಯ ಬಿ.ಜೆ.ಪಿ. ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ಮುರುಗೇಶ್ ಆರ್. ನಿರಾಣಿ ಅವರ ಜತೆಯಲ್ಲಿ ಜಿಲ್ಲೆಯ ಮುಖಂಡರು ಪ್ರಸ್ತುತ ಜಿಲ್ಲೆಯ ರಾಜಕಾರಣದ ವಿದ್ಯಮಾನಗಳ ಬಗ್ಗೆ ಚರ್ಚಿಸಿದರು. ಕೇಂದ್ರದ ಮಾಜಿ ಸಚಿವ ಜಿ.ಎಂ. ಸಿದ್ದೇಶ್ವರ, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷರಾದ ಹನಗವಾಡಿ ವೀರೇಶ್, ಯಶವಂತ್ ರಾವ್ ಜಾಧವ್, ಎನ್.ಇ. ಜೀವನಮೂರ್ತಿ, ರಾಜ್ಯ ಎಸ್.ಟಿ. ಮೋರ್ಚಾ ಉಪಾಧ್ಯಕ್ಷ ಶ್ರೀನಿವಾಸ ದಾಸಕರಿಯಪ್ಪ, ಮುಖಂಡರಾದ ಬಿ.ಎಸ್. ಜಗದೀಶ್, ಎ.ವೈ. ಪ್ರಕಾಶ್, ರಾಜನಹಳ್ಳಿ ಶಿವಕುಮಾರ್, ದೇವರಮನಿ ಶಿವಕುಮಾರ್, ಮುರುಗೇಶ್ ಆರಾಧ್ಯ, ಶಿವನಹಳ್ಳಿ ರಮೇಶ್, ದೊಗ್ಗಳ್ಳಿ ವೀರೇಶ್, ಸಂಗನಗೌಡ್ರು, ಅನಿಲ್ ಕತ್ತಲಗೆರೆ, ಶ್ಯಾಗಲೆ ದೇವೇಂದ್ರಪ್ಪ, ಅಣಜಿ ಗುಡ್ಡೇಶ್, ಜಗದೀಶ್ ಯಕ್ಕನಹಳ್ಳಿ, ಎಂ.ಆರ್. ಮಹೇಶ್ ಇದ್ದರು.    

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net