

ದಾವಣಗೆರೆ : ದಾವಣಗೆರೆ ಲೋಕಸಭಾ ಕ್ಷೇತ್ರದ ಮುಖಂಡರಾದ ಗಾಯತ್ರಿ ಸಿದ್ದೇಶ್ವರ ಗುರುವಾರ ನಗರದ ವಿವಿಧೆಡೆ ಬಿಜೆಪಿ ಸದಸ್ಯತ್ವ ಅಭಿಯಾನದಲ್ಲಿ ಪಾಲ್ಗೊಂಡರು. ಕೆಲವು ಆಟೋಮೊಬೈಲ್ ಶೋರೂಮ್‌ಗಳಿಗೆ ಭೇಟಿ ನೀಡಿ, ಪಕ್ಷವನ್ನು ಬಲಿಷ್ಠಗೊಳ್ಳಲು ಹೆಚ್ಚು ಸದಸ್ಯರನ್ನು ನೋಂದಾಯಿಸಬೇಕು ಎಂದು ಹೇಳಿದರು. ನಂತರ ಕೆ.ಟಿ.ಜೆ. ನಗರದಲ್ಲಿ ವಿಜಯದಶಮಿ ಪ್ರಯುಕ್ತ ತುಳಜಾ ಭವಾನಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ದೂಡಾ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ರಘು ಅಂಬರ್‌ಕರ್, ಗೌತಮ್ ಜೈನ್, ಶಿವಯೋಗಿ ಗ್ಯಾರಳ್ಳಿ, ಕಿಶೋರ್, ಮಹಿಳಾ ಮೋರ್ಚಾ ಮುಖಂಡರಾದ ಭಾಗ್ಯಮ್ಮ ಪಿಸಾಳೆ, ಪುಷ್ಪಾ ವಾಲಿ ಇದ್ದರು.