ಅಡುಗೆ ಮಾಡಿ ಗಮನ ಸೆಳೆದ ಕಾರ್ಯಕರ್ತೆಯರು

aduge.jpg
Published on

ದಾವಣಗೆರೆ : ‘ಮಹಿಳೆ ಅಡುಗೆ ಮನೆಗೆ ಸೀಮಿತ’ ಎಂದು ಕಾಂಗ್ರೆಸ್ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ನೀಡಿದ್ದಾರೆ ಎನ್ನಲಾದ ಹೇಳಿಕೆಯ ಹಿನ್ನೆಲೆಯಲ್ಲಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ‘ಅಡುಗೆಗೂ ಸಿದ್ಧ, ಜನಸೇವೆಗೂ ಬದ್ಧ’ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
 ನಗರದ ಜಯದೇವ ವೃತ್ತದಲ್ಲಿ ಉಪ್ಪಿಟ್ಟು, ಚಹಾ ಸಿದ್ಧಪಡಿಸುವ ಮೂಲಕ, ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಸಮರ್ಥರಿದ್ದಾರೆ ಎಂಬ ಸಂದೇಶವನ್ನು ಕಾರ್ಯಕರ್ತೆಯರು ರವಾನಿಸಿದರು. ಈ ಕಾರ್ಯಕ್ರಮಕ್ಕೆ ಮಹಿಳೆಯರು ಸಿಲಿಂಡರ್, ಸ್ಟೌವ್, ಪಾತ್ರೆಗಳೊಂದಿಗೆ ಬಂದಿದ್ದರು.
 ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್. ರಾಜಶೇಖರ್, ಮುಖಂಡರಾದ ಜಯಮ್ಮ, ಭಾಗ್ಯಾ ಪಿಸಾಳೆ, ಪ್ರಭಾವತಿ, ಅಂಬುಜಾ, ರೂಪಾ ಕಾಟ್ವೆ, ದೇವೀರಮ್ಮ, ಯಶೋದಾ, ಉಮಾ ಪ್ರಕಾಶ್, ಸುಧಾ ಜಯರುದ್ರೇಶ್, ಕೆ.ಬಿ. ಕೊಟ್ರೇಶ್, ಎಸ್.ಟಿ. ವೀರೇಶ್, ಪಿ.ಸಿ. ಶ್ರೀನಿವಾಸ್ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net