ಕೇಂದ್ರದ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಿ

bjp_20240212235456291.jpg
Published on

ದಾವಣಗೆರೆ : ಪ್ರಧಾನಿ ನರೇಂದ್ರ ಮೋದಿ ಅವರು ಜಾರಿಗೆ ತಂದಿರುವ ಅಭಿವೃದ್ಧಿ ಯೋಜನೆಗಳ ಬಗ್ಗೆ ಸಮಾಜದಲ್ಲಿ ಅರಿವು ಮೂಡಿಸಬೇಕು ಎಂದು ಬಿಜೆಪಿ ಪಾಂಡಿಚೇರಿ ಘಟಕದ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಹೇಮಾ ಮಾಲಿನಿ ಹೇಳಿದರು.
 ಸಂಘಟನಾತ್ಮಕ ಪ್ರವಾಸದ ಅಂಗವಾಗಿ ಸೋಮವಾರ ನಗರಕ್ಕೆ ಭೇಟಿ ನೀಡಿದ್ದ ಅವರು, ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ, ಕೇಂದ್ರ ಸರ್ಕಾರದ ಯೋಜನೆಗಳ ಮಹಿಳಾ ಫಲಾನುಭವಿಗಳ ಜತೆಗೆ ಸೆಲ್ಫಿ ಕಾರ್ಯಕ್ರಮದಲ್ಲಿ ಮಾತನಾಡಿದರು.
 ಉಜ್ವಲಾ, ಮುದ್ರಾ, ಜಲಜೀವನ್ ಇನ್ನಿತರ ಯೋಜನೆಗಳ ಬಗ್ಗೆ ಪ್ರಸ್ತಾಪಿಸಿ, ಇವುಗಳ ಬಗ್ಗೆ ಇತರರಿಗೆ ತಿಳಿಸಿದಾಗ ಮಾತ್ರ ಹೆಚ್ಚು ಜನರು ಪ್ರಯೋಜನ ಪಡೆಯುವ ಜತೆಗೆ ಪಕ್ಷಕ್ಕೂ ಶಕ್ತಿ ಬರಲಿದೆ. ಈ ಕೆಲಸವನ್ನು ಮಹಿಳೆಯರು ಸಮರ್ಥವಾಗಿ ಮಾಡಬಲ್ಲರು ಎಂದು ತಿಳಿಸಿದರು.
 ಫಲಾನುಭವಿಗಳಾದ ಗೀತಮ್ಮ, ಪವಿತ್ರಾ ಇನ್ನಿತರರು ಕೇಂದ್ರದ ಯೋಜನೆಗಳಿಂದ ತಮಗೆ ಆಗಿರುವ ಲಾಭದ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದರು. ಉಜ್ವಲ, ವಿಶ್ವಕರ್ಮ, ಜನಧನ್, ಸುಕನ್ಯಾ ಸಮೃದ್ಧಿ, ಬೆಳೆ ವಿಮೆ ಯೋಜನೆಗಳು, ಸ್ವಸಹಾಯ ಸಂಘಗಳಿಗೆ ದೊರೆತಿರುವ ಆರ್ಥಿಕ ನೆರವು, ಕೋವಿಡ್ ಲಸಿಕೆ ಬಗ್ಗೆ ಪ್ರಸ್ತಾಪಿಸಿದರು.
 ಪಕ್ಷದ ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಪುಷ್ಪಾ ವಾಲಿ, ಭಾಗ್ಯಾ ಪಿಸಾಳೆ, ಕಾರ್ಯಕ್ರಮದ ಸಂಚಾಲಕಿ ಜಯಮ್ಮ ಇದ್ದರು.
 ಇದಕ್ಕೂ ಮೊದಲು ಹೇಮಾ ಮಾಲಿನಿ ಮತ್ತು ಮಹಿಳಾ ಮೋರ್ಚಾ ತಂಡದ ಸದಸ್ಯರು ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರನ್ನು ಭೇಟಿ ಮಾಡಿದರು. ಕಾಲೇಜು ವಿದ್ಯಾರ್ಥಿಗಳ ಜತೆಗೆ ಚರ್ಚಿಸಿದರು. ಬೂತ್ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net