

ದಾವಣಗೆರೆ : ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ, ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಅವರ ಜನ್ಮದಿನವನ್ನು ಮಹಾಸಭಾದ ಜಿಲ್ಲಾ ಘಟಕದಿಂದ ನಗರದ ಎಂಬಿಎ ಕಾಲೇಜು ಆವರಣದ ಜಿಲ್ಲಾ ಕಚೇರಿಯಲ್ಲಿ ಶುಕ್ರವಾರ ಆಚರಿಸಲಾಯಿತು.
ಮಹಾಸಭಾದ ಜಿಲ್ಲಾಧ್ಯಕ್ಷ ದೇವರಮನೆ ಶಿವಕುಮಾರ್, ರಾಷ್ಟ್ರೀಯ ಉಪಾಧ್ಯಕ್ಷರಾದ ಅಥಣಿ ವೀರಣ್ಣ, ಅಣಬೇರು ರಾಜಣ್ಣ, ರಾಷ್ಟ್ರೀಯ ಕಾರ್ಯದರ್ಶಿ ರೇಣುಕಾಪ್ರಸನ್ನ, ಅಲ್ಲಂ ವೀರಭದ್ರಪ್ಪ ಇದ್ದರು.
ಜಿಲ್ಲೆಯ ಮುಖಂಡರಾದ ಶುಭಾ ಐನಳ್ಳಿ, ಪುಷ್ಪಾ ವಾಲಿ, ನಿರ್ಮಲಾ ಸುಭಾಷ್, ಯಶೋದಮ್ಮ, ಗೀತಾ ಚಂದ್ರಶೇಖರ್, ಐಗೂರು ಚಂದ್ರಶೇಖರ್, ವಿಶ್ವನಾಥ್ ಬುಳ್ಳಾಪುರ, ಕರೇಶಿವಪ್ಳ ಸಿದ್ದೇಶ್, ಅಜ್ಜಂಪುರ ಶೆಟ್ರು ವಿಜಯಕುಮಾರ್, ಬಿ.ಜೆ. ರಮೇಶ್, ಸಂದೀಪ್ ಅಣಬೇರು, ರೇಖಾ ವಾಲಿ, ಶಶಿಕಲಾ ನಲ್ಕುದುರೆ, ಶಂಭು ಉರೇಕೊಂಡಿ ಪಾಲ್ಗೊಂಡಿದ್ದರು.