ಗಾಂಧೀಜಿ, ಶಾಸ್ತ್ರೀಜಿ ಜಯಂತಿ ಆಚರಣೆ

DVG-ANMOL-2.jpg
Published on

ದಾವಣಗೆರೆ : ಶಿರಮಗೊಂಡನಹಳ್ಳಿ ಅನ್‌ಮೋಲ್ ಪಬ್ಲಿಕ್ ಶಾಲೆಯಲ್ಲಿ ಭಜನೆ ಹಾಗೂ ದೇಶಭಕ್ತಿ ಗೀತೆಗಳೊಂದಿಗೆ ಗಾಂಧೀಜಿ ಮತ್ತು ಶಾಸ್ತ್ರೀಜಿ ಜಯಂತಿ ಆಚರಿಸಲಾಯಿತು.
 ಆರ್.ಎಲ್. ಕಾನೂನು ಕಾಲೇಜು ನಿವೃತ್ತ ಪ್ರಾಂಶುಪಾಲ ಡಾ. ಎಂ.ಸೋಮಶೇಖರ್ ಮಾತನಾಡಿ, ಇಬ್ಬರೂ ಮಹಾನ್ ವ್ಯಕ್ತಿಗಳ ತತ್ವ ಆದರ್ಶ ಮೈಗೂಡಿಸಿಕೊಂಡು ನಡೆಯಬೇಕಿದೆ ಎಂದರು.
 ಸಂಸ್ಥೆಯ ಜಂಟಿ ಕಾರ್ಯದರ್ಶಿ ಕೆ.ಇ.ಭೈರೇಶ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಡಿ.ವಿ.ರವೀಂದ್ರ, ಖಜಾಂಚಿ ಎಸ್.ಎಸ್.ರಾಜು, ಕಾಲೇಜಿನ ಶೈಕ್ಷಣಿಕ ಸಲಹೆಗಾರ ಎಸ್.ಚಿದಾನಂದ್, ಪ್ರಾಚಾರ್ಯ ಕೊಟ್ರೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net