

ದಾವಣಗೆರೆ : ಎಲ್ಲ ಜನಾಂಗದವರ ಪ್ರೀತಿ, ವಿಶ್ವಾಸದೊಂದಿಗೆ ದಾವಣಗೆರೆಯನ್ನು ಮಾದರಿ ಜಿಲ್ಲೆ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಸಂಕಲ್ಪ ವ್ಯಕ್ತಪಡಿಸಿದರು. ಜಿಲ್ಲಾ ಕಾಂಗ್ರೆಸ್ ಸಮಿತಿ ಮತ್ತು ಎಸ್‌ಎಸ್‌ಎಂ ಅಭಿಮಾನಿಗಳ ಬಳಗದಿಂದ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ಸೋಮವಾರ, ತಮ್ಮ 58ನೇ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು. ಮೊದಲ ಬಾರಿ ಸಚಿವರಿದ್ದಾಗ ನಗರದಲ್ಲಿ 15 ಸಾವಿರ ಆಶ್ರಯ ಮನೆಗಳನ್ನು ನಿರ್ಮಾಣ ಮಾಡಿದ್ದು, ಕುಂದುವಾಡ ಕೆರೆ ಕಟ್ಟಿದ್ದನ್ನು ನೆನಪು ಮಾಡಿಕೊಟ್ಟರು. ಜನರ ಬದುಕಿಗೆ ಆಸರೆಯಾಗುವ, ಅವರ ಆರ್ಥಿಕ ಪರಿಸ್ಥಿತಿ ಸುಧಾರಿಸುವ ನಿಟ್ಟಿನಲ್ಲಿ ಕೆಲಸಗಳಾದವು ಎಂದರು. ಎಲ್ಲೆಡೆ ಕಾಂಕ್ರಿಟ್ ರಸ್ತೆಗಳು ನಿರ್ಮಾಣವಾಗಿವೆ. ಎಂಥ ಮಳೆ ಬಂದರೂ ಪ್ರವಾಹ ಉಂಟಾಗದಂತೆ ಯೋಜಿತವಾಗಿ ಚರಂಡಿ ವ್ಯವಸ್ಥೆ ಮಾಡಲಾಗಿದೆ ಎಂದು ತಮ್ಮ ಅವಧಿಯಲ್ಲಾದ ಕೆಲಸಗಳನ್ನು ಮೆಲುಕು ಹಾಕಿದರು. ಜಿಲ್ಲೆಯ ಪ್ರತಿಯೊಂದು ಊರಿನಲ್ಲೂ ಒಳಚರಂಡಿ ವ್ಯವಸ್ಥೆ ಕಲ್ಪಿಸುವ ಉದ್ದೇಶವಿದೆ. ಶೀಘ್ರವೇ ಇದನ್ನು ಅನುಷ್ಠಾನಕ್ಕೆ ತರಲಾಗುವುದು. ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ಮೂಲಕ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸಲಾಗುವುದು ಎಂದು ಹೇಳಿದರು. ಜಗಳೂರು ಶಾಸಕ ಬಿ. ದೇವೇಂದ್ರಪ್ಪ, ಹರಪನಹಳ್ಳಿ ಶಾಸಕಿ ಲತಾ ಮಲ್ಲಿಕಾರ್ಜುನ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ. ಬಸವರಾಜ ಮಾತನಾಡಿದರು. ಮಾಜಿ ಶಾಸಕ ಎಸ್. ರಾಮಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ, ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ, ಪಕ್ಷದ ಮುಖಂಡರಾದ ಡಿ. ಬಸವರಾಜ, ಕೆ.ಜಿ. ಶಿವಕುಮಾರ್, ಅಯೂಬ್ ಪೈಲ್ವಾನ್, ಮುದೇಗೌಡ್ರ ಗಿರೀಶ್, ನಂದಿಗಾವಿ ಶ್ರೀನಿವಾಸ್, ಅನಿತಾಬಾಯಿ, ಪ್ರಕಾಶ್ ಪಾಟೀಲ್, ಎಸ್. ಮಲ್ಲಿಕಾರ್ಜುನ್ ಇದ್ದರು. ಮಾಗಾನಹಳ್ಳಿ ಪರಶುರಾಮ್, ಎ. ನಾಗರಾಜ, ಚಮನ್‌ಸಾಬ್, ಮಾಲತೇಶ ಜಾಧವ್, ಕೋಗುಂಡಿ ಬಕ್ಕಪ್ಪ, ಬಿ.ಜಿ. ನಾಗರಾಜ್ ಪಾಲ್ಗೊಂಡಿದ್ದರು. ...