

ದಾವಣಗೆರೆ : ಪ್ರಧಾನಿ ನರೇಂದ್ರ ಮೋದಿ ಜನ್ಮದಿನದ ಪ್ರಯುಕ್ತ ಸೇವಾ ಚಟುವಟಿಕೆಯಾಗಿ ನಗರದ ಅಂಗವಿಕಲರ ಆಶಾಕಿರಣ ಟ್ರಸ್ಟ್ನಲ್ಲಿ ಗುರುವಾರ, ಮಹಾನಗರ ಪಾಲಿಕೆ ಮಾಜಿ ಸದಸ್ಯ ಶಿವನಹಳ್ಳಿ ರಮೇಶ್ ನೇತೃತ್ವದಲ್ಲಿ 200 ಮಕ್ಕಳಿಗೆ ಸ್ವೆಟರ್ ವಿತರಣೆ ಮಾಡಲಾಯಿತು. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೇಶದ ಜನತೆಗೆ ಮೂಲಸೌಕರ್ಯ ಅಭಿವೃದ್ಧಿ, ಪಾರದರ್ಶಕ ಹಾಗೂ ಕಳಂಕ ರಹಿತ ಆಡಳಿತ ಸೇವೆಯನ್ನು ಸ್ಮರಿಸುತ್ತ, ಪ್ರಧಾನಿ ಅವರಿಗೆ ಭಗವಂತ ಆರೋಗ್ಯ ಹಾಗೂ ದೇಶವನ್ನು ಮುನ್ನಡೆಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಲಾಯಿತು. ಬಿಜೆಪಿ ಮುಖಂಡರಾದ ತಾರೇಶ ನಾಯ್ಕ, ಎಚ್.ಎನ್. ಶಿವಕುಮಾರ್, ಮಾಜಿ ಮೇಯರ್ ಗುರುನಾಥ್, ಶಿವರಾಜ್ ಪಾಟೀಲ್, ಪಾಲಿಕೆ ಮಾಜಿ ಸದಸ್ಯ ಶಿವಾನಂದ, ಸುರೇಶ್, ಬಸವರಾಜಯ್ಯ, ಗಣೇಶ್ ರಾವ್, ದಿವಾಕರ್, ಚಂದ್ರು, ರುದ್ರೇಶ್ ಸಾಲಂಕಿ, ನಾಗರಾಜ್ ಸುರ್ವೆ, ಗೀತಮ್ಮ, ಜಯಣ್ಣ ಹಾಗೂ ಅನೇಕ ಕಾರ್ಯಕತರು ಇದ್ದರು.