

ದಾವಣಗೆರೆ : ಪ್ರಧಾನಿ ನರೇಂದ್ರ ಮೋದಿ ಅವರ 75ನೇ ವರ್ಷದ ಜನ್ಮದಿನದ ಹಿನ್ನೆಲೆಯಲ್ಲಿ ಬುಧವಾರ ಬಿಜೆಪಿಯಿಂದ ಜಿಲ್ಲಾದ್ಯಂತ ಅನೇಕ ಸೇವಾ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿತ್ತು. ನಿಟ್ಟುವಳ್ಳಿ ದುರ್ಗಾಂಬಿಕಾ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಇಎಸ್‌ಐ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ವಿತರಿಸಲಾಯಿತು. ದಾವಣಗೆರೆ ಉತ್ತರದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್. ರಾಜಶೇಖರ್, ವಿಧಾನ ಪರಿಷತ್ತಿನ ವಿಪಕ್ಷದ ಮಾಜಿ ಮುಖ್ಯ ಸಚೇತಕ ಡಾ. ಎ.ಎಚ್. ಶಿವಯೋಗಿ ಸ್ವಾಮಿ ನೇತೃತ್ವದಲ್ಲಿ ಸೇವಾ ಚಟುವಟಿಕೆಗಳು ನೆರವೇರಿದವು. ಉತ್ತರ ಮಂಡಲ ಅಧ್ಯಕ್ಷ ತಾರೇಶ್ ನಾಯಕ್, ಮುಖಂಡ ಲೋಕಿಕೆರೆ ನಾಗರಾಜ, ಹಾವೇರಿ ಉಸ್ತುವಾರಿ ಎಲ್.ಎನ್. ಕಲ್ಲೇಶ್, ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್ ನಾಯ್ಕ್, ಪಾಲಿಕೆ ಮಾಜಿ ಸದಸ್ಯ ಕೆ.ಎಂ. ವೀರೇಶ್, ಬೆಳ್ಳೂಡಿ ಮಂಜುನಾಥ್, ಶ್ರೀನಿವಾಸ, ಮಂಜ ನಾಯಕ್, ಮಂಡಲ ಪ್ರಧಾನ ಕಾರ್ಯದರ್ಶಿ ಗುತ್ತೂರು ಮಂಜು, ದುರ್ಗೇಶ್, ಕೊಟ್ರೇಶ್, ವಾಸು, ಶ್ರೀನಿವಾಸ್ ಪೂಜಾರಿ ಇದ್ದರು. ಚನ್ನಗಿರಿಯ ಟಿ.ಬಿ. ವೃತ್ತದಲ್ಲಿ ಸಿಹಿ ವಿತರಣೆ, ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ವಿತರಿಸಲಾಯಿತು. ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಪಾಲ್ಗೊಂಡಿದ್ದರು. ಹೊನ್ನಾಳಿಯ ನೂರಕ್ಕೂ ಹೆಚ್ಚು ಬೂತ್‌ಗಳಲ್ಲಿ ತಾಯಿ ಹೆಸರಿನಲ್ಲಿ ಒಂದೊಂದು ಗಿಡ ನೆಡಲಾಯಿತು. ಮಂಡಲ ಅಧ್ಯಕ್ಷ ನಾಗರಾಜ ಅರಕೆರೆ ಇನ್ನಿತರರು ಇದ್ದರು. ಜಗಳೂರು ತಾಲೂಕಿನ 5 ಗ್ರಾಮಗಳಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು. ಆರಾಧ್ಯ ಇನ್ನಿತರ ಕಾರ್ಯಕರ್ತರು ಪಾಲ್ಗೊಂಡಿದ್ದರು. ಮಾಯಕೊಂಡದ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹಣ್ಣು ವಿತರಿಸಲಾಯಿತು. ...