ಸಂಸ್ಕೃತಿ, ತತ್ವಶಾಸ್ತ್ರ ಬೆಳೆಸಿದ ಭೈರಪ್ಪ

dvg-parva_20251006232413698.jpg
Published on

ದಾವಣಗೆರೆ :  ಸಹಾಯಕ ಪ್ರಾಧ್ಯಾಪಕ ಭೀಮಾಶಂಕರ ಜೋಶಿ ಹೇಳಿಕೆ  ವಿಜಯವಾಣಿ ಸುದ್ದಿಜಾಲ ದಾವಣಗೆರೆ  ಡಾ. ಎಸ್.ಎಲ್. ಭೈರಪ್ಪ ಅವರು ಪಾಂಡಿತ್ಯಪೂರ್ಣವಾದ ಕಾದಂಬರಿಗಳ ಮೂಲಕ ಭಾರತೀಯ ಸಂಸ್ಕೃತಿ, ಇತಿಹಾಸ, ತತ್ವಶಾಸ್ತ್ರವನ್ನು ಬೆಳೆಸಿದರು ಎಂದು ದಾವಣಗೆರೆ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ಭೀಮಾಶಂಕರ ಜೋಶಿ ಹೇಳಿದರು.  ನಗರದ ಬಾಪೂಜಿ ಇನ್‌ಸ್ಟಿಟ್ಯೂಟ್ ಆಫ್ ಹೈಟೆಕ್ ಎಜುಕೇಶನ್ - ವಾಣಿಜ್ಯ ವಿಭಾಗದಿಂದ ಇತ್ತೀಚೆಗೆ ಆಯೋಜಿಸಿದ್ದ ಎಸ್.ಎಲ್. ಭೈರಪ್ಪ: ಒಂದು ಸಾಹಿತ್ಯ ಪರ್ವ-ಅನಾವರಣ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.  ಭೈರಪ್ಪ ಅವರು ಕನ್ನಡದ ಕೀರ್ತಿಯನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಸಿದವರು. ಪ್ರಪಂಚದಾದ್ಯಂತ ಓದುಗರ ಬಳಗ ಹೊಂದಿರುವ ಶ್ರೇಷ್ಠ ವಿದ್ವಾಂಸರು. ಅವರು ಬೆಳೆದು ಬಂದ ರೀತಿ, ಗುರುಗಳ ಮಾರ್ಗದರ್ಶನ ಇದಕ್ಕೆ ಮುಖ್ಯ ಕಾರಣ ಎಂದು ತಿಳಿಸಿದರು.  ಸಂಸ್ಕೃತಿ ಚಿಂತಕ ಡಾ. ಶಶಿಧರ್ ನರೇಂದ್ರ ಮಾತನಾಡಿ, ಸಾಹಿತ್ಯದ ಬಗ್ಗೆ ಒಲವು, ಜ್ಞಾನಕ್ಕಿಂತ ದೊಡ್ಡದಾದ ವಸ್ತು ಜಗತ್ತಿನಲ್ಲಿ ಯಾವುದೂ ಇಲ್ಲ. ಭಾರತದ ಎಲ್ಲ ಭಾಷೆಗಳಲ್ಲಿ ಅವರ ಕೃತಿಗಳು ಲಭ್ಯ ಇವೆ. ಜರ್ಮನಿ, ಫ್ರಾನ್ಸ್, ಚೀನಾ ಇನ್ನಿತರ ದೇಶದ ಭಾಷೆಗಳಲ್ಲೂ ಅನುವಾದಗೊಂಡಿವೆ. ಅವರ ಆತ್ಮಕಥೆಯನ್ನು ಒಳಗೊಂಡ ಕೃತಿಯಾದ ‘ಭಿತ್ತಿ’ಯನ್ನು ಓದಿ, ಪ್ರೇರಣೆ ಪಡೆಯಬೇಕು ಎಂದು ಬಿ.ಕಾಂ. ವಿದ್ಯಾರ್ಥಿಗಳಿಗೆ ತಿಳಿಸಿದರು.  ಬಾಪೂಜಿ ಬಿ ಸ್ಕೂಲ್ಸ್ ಹಳೆಯ ವಿದ್ಯಾರ್ಥಿನಿ ಕೆ.ಎಂ. ಭ್ರಮರಾಂಬಿಕ ದೇವಿ ಮಾತನಾಡಿದರು. ಕಾಲೇಜಿನ ನಿರ್ದೇಶಕ ಡಾ. ಎಚ್.ವಿ. ಸ್ವಾಮಿ ತ್ರಿಭುವಾನಂದ ಅಧ್ಯಕ್ಷತೆ ವಹಿಸಿದ್ದರು. ಮಂಜುಳಾ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಬಿ.ಕಾಂ ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಇದ್ದರು.  

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net