ಭದ್ರಾ ಜಲಾಶಯಕ್ಕೆ ಬಾಗಿನ ಸಲ್ಲಿಕೆ

dvg-bagina.jpg
Published on

ದಾವಣಗೆರೆ  : ಭಾರತೀಯ ಜನತಾ ಪಾರ್ಟಿ, ಮಹಾನಗರ ಪಾಲಿಕೆ ಮಾಜಿ ಸದಸ್ಯರ ಒಕ್ಕೂಟದಿಂದ ಶುಕ್ರವಾರ ಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಿಸಲಾಯಿತು.  ಜೀವನಾಡಿ ಭದ್ರೆಯು ತುಂಬಿ ಹರಿದರೆ ವರ್ಷಪೂರ್ತಿ ದಾವಣಗೆರೆ ನಗರದ ನಾಗರಿಕರಿಗೆ ನೀರಿನ ಬವಣೆ ನೀಗಿಸುತ್ತದೆ. ಈ ಹಿನ್ನೆಲೆಯಲ್ಲಿ ಜೀವ ಜಲಕ್ಕೆ ಪೂಜೆ ಮಾಡಿ ಬಾಗಿನ ಸಲ್ಲಿಸಲಾಯಿತು. ಪ್ರತಿ ವರ್ಷ ಇದೇ ರೀತಿ ತುಂಬಿ ಹರಿಯುವ ಮೂಲಕ ರೈತರ ಜೀವನ ಹಸನು ಮಾಡಲಿ ಎಂದು ಪ್ರಾರ್ಥಿಸಲಾಯಿತು.  ಮಾಜಿ ಮೇಯರ್ ವಸಂತ ಕುಮಾರ್, ಎಚ್.ಎನ್. ಗುರುನಾಥ್, ಮಾಜಿ ಉಪ ಮೇಯರ್ ಪಿ.ಎಸ್. ಜಯಣ್ಣ, ಪಾಲಿಕೆಯ ಮಾಜಿ ವಿಪಕ್ಷ ನಾಯಕ ಪ್ರಸನ್ನ ಕುಮಾರ್, ಮಾಜಿ ಸದಸ್ಯರಾದ ಎಚ್.ಎನ್. ಶಿವಕುಮಾರ್, ಕೃಷ್ಣಮೂರ್ತಿ ಪವಾರ್, ಸಂಕೋಳ್ ಚಂದ್ರಶೇಖರ, ಯೋಗೀಶ್, ಜಯಪ್ರಕಾಶ್, ಸುರೇಶ , ಶಿವರಾಜ ಪಾಟೀಲ್, ಆವರಗೆರೆ ಸುರೇಶ, ಸಿದ್ದೇಶ್, ಮುಖಂಡರಾದ ಪ್ರಭು ಕಲ್ಬುರ್ಗಿ, ಬೇತೂರ್ ಬಸವರಾಜ್, ಎಂ.ಎನ್. ಶಿವಾಜಿರಾವ್, ವೆಂಕಟೇಶ್ ಕಾಟೆ , ಗೌಳಿ ಲಿಂಗರಾಜ್, ಮಂಜು ಗಾಂಧಿನಗರ, ವಿನಯ್ ದಿಳ್ಯಪ್ಪ, ವಿಜಯ್ ಕುಮಾರ್ ಇದ್ದರು.  

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net