ಬಡವರ ಕಲ್ಯಾಣಕ್ಕೆ ಕಾಂಗ್ರೆಸ್ ಕೊಡುಗೆ

4.jpg
Published on

ದಾವಣಗೆರೆ : ಕಾಂಗ್ರೆಸ್ ಬಡವರ ಪಕ್ಷ ಎನ್ನುವುದಕ್ಕೆ ಇತ್ತೀಚೆಗೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಬಡವರ ಕಲ್ಯಾಣಕ್ಕೆ ನೀಡಿರುವ ಕೊಡುಗೆಗಳೇ ಉದಾಹರಣೆ ಎಂದು ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಹೇಳಿದರು.
 ತಮ್ಮ ಗೃಹ ಕಚೇರಿಯಲ್ಲಿ ಶನಿವಾರ, ಮಹಾನಗರ ಪಾಲಿಕೆಯ ವಿವಿಧ ಯೋಜನೆಯಡಿ ಅರ್ಹ ಬಡ ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನು ವಿತರಿಸಿ ಮಾತನಾಡಿದರು.
 ಕಾಂಗ್ರೆಸ್ ಪಕ್ಷ ಸ್ವಾತಂತ್ರ್ಯ ಬಂದ ದಿನದಿಂದಲೂ ಬಡವರ ಕಲ್ಯಾಣಕ್ಕೆ ಅನೇಕ ಕಾರ‌್ಯಕ್ರಮಗಳನ್ನು ನೀಡುತ್ತ ಬಂದಿದೆ, ಇಂದಿಗೂ ಸಹ ಅದೇ ದಾರಿಯಲ್ಲಿ ಸಾಗಿದೆ ಎಂದರು.
 ಎಸ್.ಎಸ್. ಕೇರ್ ಟ್ರಸ್ಟ್‌ನ ಪ್ರಭಾ ಮಲ್ಲಿಕಾರ್ಜುನ್ ಮಾತನಾಡಿ, ಮಹಿಳೆಯರು ಸ್ವಾವಲಂಬಿ ಜೀವನ ನಡೆಸಲು ಈ ಯೋಜನೆ ಅತ್ಯಂತ ಅನುಕೂಲವಾಗಿದ್ದು, ಈಗ ನೀಡಿರುವ ಹೊಲಿಗೆ ಯಂತ್ರಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು.
 ಮೇಯರ್ ವಿನಾಯಕ ಪೈಲ್ವಾನ್, ಮಹಾನಗರ ಪಾಲಿಕೆ ಸದಸ್ಯರಾದ ಎ. ನಾಗರಾಜ, ರಹೀಂ ಸಾಬ್, ಜಾಕೀರ್ ಅಲಿ, ಉದಯಕುಮಾರ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ‌್ಯದರ್ಶಿ ಎಸ್.ಮಲ್ಲಿಕಾರ್ಜುನ್, ಪ್ರಕಾಶ್ ಪಾಟೀಲ್, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಅನಿತಾಬಾಯಿ ಮಾಲತೇಶ್ ಇದ್ದರು.
 ...
 * ಬಡ ಮಕ್ಕಳಿಗೆ ಪುಸ್ತಕ ವಿತರಣೆ
 ಬಡ ಮಕ್ಕಳಿಗೆ ಸ್ವಂತ ಹಣದಲ್ಲಿ ಪುಸ್ತಕಗಳನ್ನು ವಿತರಿಸುವ ಮೂಲಕ ಪ್ರಭಾ ಮಲ್ಲಿಕಾರ್ಜುನ್ ಬಡವರಿಗೆ ನೆರವಾಗಿದ್ದಾರೆ.
 ನಗರದ ವಿಧವೆಯೊಬ್ಬರು ಕೂಲಿ ಮಾಡಿ ಮೂವರು ಮಕ್ಕಳನ್ನು ಓದಿಸುತ್ತಿದ್ದು, ಆ ಮಕ್ಕಳ ವಿದ್ಯಾಭ್ಯಾಸಕ್ಕೆ ಬೇಕಾಗುವ ನೋಟ್ ಪುಸ್ತಕ, ಜಾಮಿಟ್ರಿ ಬಾಕ್ಸ್, ಪೆನ್, ಪೆನ್ಸಿಲ್ ಸೇರಿ ಹಲವು ಪರಿಕರಗಳನ್ನು ನೀಡಿದರು. ಡಾ. ವಿಜಯಕುಮಾರ್ ಸಿ.ಎಸ್., ಎಂ.ನಾಗರಾಜ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net