ಶಾಲೆಗಳಲ್ಲಿ ಆಯುರ್ವಿದ್ಯಾ ಕಾರ್ಯಕ್ರಮ

DVG-AYUSH-18.jpg
Published on

ದಾವಣಗೆರೆ : ರಾಜ್ಯದ 5 ಜಿಲ್ಲೆಗಳಲ್ಲಿ ಆಯುರ್ವಿದ್ಯಾ ಕಾರ್ಯಕ್ರಮ ನಿಗದಿಪಡಿಸಿದ್ದು, ಜಿಲ್ಲೆಯ ಆಯ್ದ 60 ಶಾಲೆಗಳಲ್ಲಿ ಆಯೋಜಿಸಲಾಗುವುದು ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ. ಬಿ.ಯು.ಯೋಗೇಂದ್ರಕುಮಾರ್ ಹೇಳಿದರು.  ಜಿಲ್ಲಾ ಆಯುಷ್ ಇಲಾಖೆ ಮತ್ತು ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ತಾಲೂಕಿನ ಮಾಗಾನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ರಾಷ್ಟ್ರೀಯ ಅಭಿಯಾನದಡಿ ಆಯುರ್ವಿದ್ಯಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.  ಆಯುಷ್ ಇಲಾಖಾ ವೈದ್ಯರು ಮತ್ತು ವೈದ್ಯರನ್ನೊಳಗೊಂಡ ತಂಡವು ಶಾಲೆಗಳಿಗೆ ಭೇಟಿ ನೀಡಿ ಆಯುಷ್ ವೈದ್ಯ ಪದ್ಧತಿಗಳ ಬಗ್ಗೆ ಜಾಗೃತಿ ಮೂಡಿಸಲಿದೆ. ಕರಪತ್ರ ಹಾಗೂ ಔಷಧಿ ಸಸ್ಯಗಳ ವಿತರಿಸಲಾಗುವುದು. ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಕಾರ್ಯಕ್ರಮ ಏರ್ಪಡಿಸಿ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.  ಡಾ. ಕೆ.ಎಸ್.ಕಿಶೋರಿ ಔಷಧಿ ಸಸ್ಯಗಳ ಮಾಹಿತಿ ನೀಡಿದರು. ಡಾ. ಸಿದ್ದೇಶ್ ಈ. ಬಿಸನಳ್ಳಿ ಆಯುಷ್ ಕುರಿತಾಗಿ ಮಾತನಾಡಿದರು.  ಆಯುರ್ವಿದ್ಯಾ ವೈದ್ಯೆ ಡಾ. ಸಿ.ಕೆ.ವಿನುತಾ ಅವರು ದಿನಚರಿ, ಆಹಾರ ಮತ್ತು ಆರೋಗ್ಯದ ವಿಷಯ ಕುರಿತು ಉಪನ್ಯಾಸ ನೀಡಿದರು. ನಂತರ ರಸಪ್ರಶ್ನೆ ಕಾರ್ಯಕ್ರಮ ನಡೆಸಿದರು.  ಶಾಲೆಯ ಮುಖ್ಯ ಶಿಕ್ಷಕರಾದ ಡಿ.ಕೆ.ಜಯಾ ಅಧ್ಯಕ್ಷತೆ ವಹಿಸಿದ್ದರು. ಸಹ ಶಿಕ್ಷಕ ಎಲ್. ಕೃಷ್ಣನಾಯ್ಕ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net