

ದಾವಣಗೆರೆ: ದಾವಣಗೆರೆಯ ಲೇಖಕ ಎಚ್.ಬಿ. ಇಂದ್ರಕುಮಾರ್ ಅವರ ‘ಎತ್ತರ’ ಕಾದಂಬರಿಗೆ ಶಿವಮೊಗ್ಗ ಕರ್ನಾಟಕ ಸಂಘದವರು ನೀಡುವ 2022ನೇ ಸಾಲಿನ ಕುವೆಂಪು ಪ್ರಶಸ್ತಿ ದೊರಕಿದೆ.
ನ. 26 ರಂದು ನಡೆಯುವ ಬಹುಮಾನ ವಿತರಣೆ ಸಮಾರಂಭದಲ್ಲಿ 10 ಸಾವಿರ ರೂ. ನಗದು ಪುರಸ್ಕಾರ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು. ಈ ಪ್ರಶಸ್ತಿಯೊಂದಿಗೆ ಅವರ ಕತೆ, ಕಾವ್ಯ, ಕಾದಂಬರಿ ಮೂರು ಪ್ರಕಾರಗಳಲ್ಲಿಯೂ ಕರ್ನಾಟಕ ಸಂಘದ ಪ್ರಶಸ್ತಿ ದೊರಕಿದಂತಾಗಿದೆ.