ಪ್ರಭಾ ಮಲ್ಲಿಕಾರ್ಜುನ್ ಆಸ್ತಿ 44.53 ಕೋಟಿ

prabha_20240412225525151.jpg
Published on

ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರ ಒಟ್ಟು ಆಸ್ತಿ 44.53 ಕೋಟಿ ರೂ.
 ಅವರು ಶುಕ್ರವಾರ ಜಿಲ್ಲಾ ಚುನಾವಣಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದ್ದು ಅದರ ಜತೆಗೆ ತಮ್ಮ ಆಸ್ತಿಯ ವಿವರಗಳನ್ನೂ ನೀಡಿದ್ದಾರೆ.
 ಪ್ರಭಾ ಅವರಿಗೆ 21.04 ಕೋಟಿ ರೂ. ಮೌಲ್ಯದ ಮನೆ, 1.54 ಕೋಟಿ ರೂ. ಮೌಲ್ಯದ 47.11 ಎಕರೆ ಕೃಷಿ ಭೂಮಿ, 16.1 ಕೋಟಿ ರೂ. ಮೌಲ್ಯದ, 11050 ಚದರ ಅಡಿ ವಿಸ್ತೀರ್ಣದ ಕೃಷಿಯೇತರ ಭೂಮಿ ಇದೆ.
 ಅವರ ಬಳಿ 67,566 ರೂ. ನಗದು ಹಣ, ಬ್ಯಾಂಕ್ ಖಾತೆಗಳಲ್ಲಿ 13.76 ಲಕ್ಷ ರೂ. ಠೇವಣಿ ಇದೆ. ಷೇರು, ಡಿಬೆಂಚರ್ ಇನ್ನಿತರ ಕಡೆ 2.65 ಕೋಟಿ ರೂ. ಹೂಡಿಕೆ ಮಾಡಿದ್ದಾರೆ. 1 ಕೋಟಿ ರೂ. ಮೌಲ್ಯದ ಆಭರಣಗಳಿವೆ. 97.28 ಲಕ್ಷ ರೂ. ಸಾಲವಿದೆ. ಆದರೆ ಅವರ ಹೆಸರಿನಲ್ಲಿ ಯಾವುದೆ ವಾಹನ ಇಲ್ಲ. ಅವರು ಕುವೆಂಪು ವಿಶ್ವವಿದ್ಯಾಲಯದಿಂದ ಬಿ.ಡಿ.ಎಸ್. ಪದವಿ ಪಡೆದಿದ್ದಾರೆ.
 ಪ್ರಭಾ ಅವರ ಪತಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ 194.88 ಕೋಟಿ ರೂ. ಮೌಲ್ಯದ ಆಸ್ತಿಯ ಒಡೆಯರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net