ಆಶಾ ಕಾರ್ಯಕರ್ತೆಯರ ಆನ್‌ಲೈನ್ ಚಳವಳಿ

dvg asha july 18
Published on

ದಾವಣಗೆರೆ: ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘಟನೆಯ ಕರೆಯ ಮೇರೆಗೆ ನಡೆಯುತ್ತಿರುವ ಅನಿರ್ದಿಷ್ಟ ಮುಷ್ಕರದ 9ನೇ ದಿನವಾದ ಶನಿವಾರ ಆಶಾ ಕಾರ್ಯಕರ್ತೆಯರು ತಮ್ಮ ಬೇಡಿಕೆಗಳನ್ನು ಪೋಸ್ಟರ್‌ನಲ್ಲಿ ಬರೆದು ಕುಟುಂಬ ಸದಸ್ಯರು ಹಾಗೂ ತಾವು ಆರೋಗ್ಯ ಸೇವೆ ನೀಡಿದ ಜನಸಾಮಾನ್ಯರಿಂದ ಫೋಟೋ ತೆಗೆದುಕೊಂಡು ಆನ್‌ಲೈನ್ ಚಳವಳಿಯಲ್ಲಿ ಪಾಲ್ಗೊಂಡರು.

ಈ ಚಳವಳಿಯು ಭಾನುವಾರವೂ ಮುಂದುವರಿಯುತ್ತದೆ. ಸೋಮವಾರದಿಂದ ವಿವಿಧ ರೀತಿಯ ಮುಷ್ಕರದ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ.

ಅವುಗಳಲ್ಲಿ ಮುಖ್ಯವಾಗಿ ಆಶಾ ಕಾರ್ಯಕರ್ತೆಯರು ಹಳ್ಳಿಗಳ ಸಾರ್ವಜನಿಕರೊಂದಿಗೆ ಸೇರಿಕೊಂಡು ಶಾಸಕರ ಮನೆ ಮುಂದೆ ಪ್ರತಿಭಟನಾ ಧರಣಿಯನ್ನು ಹಮ್ಮಿಕೊಳ್ಳಲಾಗುವುದು ಎಂದು ಸಂಘಟನೆಯ ಜಿಲ್ಲಾಧ್ಯಕ್ಷ ತಿಪ್ಪೇಸ್ವಾಮಿ ಅಣಬೇರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net