ಭಾರತೀಯ ಪರಂಪರೆ ಬಿಂಬಿಸಿದ ಕಲಾ ಯಾನ

dvg-rvk.jpg
Published on

ದಾವಣಗೆರೆ : ನಗರದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಇತ್ತೀಚೆಗೆ, ‘ಭಾರತೀಯ ಲೋಕ ಪರಂಪರೆ’ ಎಂಬ ಶೀರ್ಷಿಕೆ ಅಡಿಯಲ್ಲಿ ‘ಕಲಾ ಯಾನ 24’ ಕಾರ್ಯಕ್ರಮ ಎರಡು ದಿನಗಳ ಕಾಲ ನಡೆಯಿತು.  ಮೊದಲ ದಿನದ ಶಾಲಾ ವಾರ್ಷಿಕೋತ್ಸವವು ಸಂಭ್ರಮದಿಂದ ನಡೆಯಿತು. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಡಾ.ಕೆ.ಎಚ್. ತುಲಸಿ ರಾಮನ್, ಡಿಡಿಪಿಐ ಜಿ. ಕೊಟ್ರೇಶ್, ದಾವಣಗೆರೆಯ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಕಾರ್ಯದರ್ಶಿ ಜಯಣ್ಣ, ಶಾಲಾ ಸಂಚಾಲಕ ಶಂಭುಲಿಂಗಪ್ಪ, ಸದಸ್ಯೆ ಭಾರತಿ ಹೆಗಡೆ, ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಉಮೇಶ್, ಶಾಲೆಯ ಪ್ರಾಚಾರ್ಯ ಮಂಜುನಾಥ್ ಇದ್ದರು. ನಂತರ  ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.  ಮಾಧ್ಯಮಿಕ ಹಂತದ ಉಪ ಪ್ರಾಚಾರ್ಯ ಶಶಿಧರ್ ಬಿರಾದಾರ್ ಸ್ವಾಗತಿಸಿದರು. ಪ್ರಾಥಮಿಕ ಹಂತದ ಉಪ ಪ್ರಾಚಾರ್ಯೆ ರೂಪಾ ಸ್ವಾಮಿ ವಂದಿಸಿದರು. ಕಾವೇರಿ ಹಾಗೂ ಮಂಜಳಾ ನಿರೂಪಿಸಿದರು.  ಎರಡನೇ ದಿನದ ಕಾರ್ಯಕ್ರಮದಲ್ಲಿ ನಟ ಕೆ. ಸುಚೇಂದ್ರ ಪ್ರಸಾದ್ ಮಾತನಾಡಿ, ಭಾರತೀಯ ಶಿಕ್ಷಣ ಮತ್ತು ಸಂಸ್ಕೃತಿ, ಮೌಲ್ಯಗಳ ಕುರಿತು ಮಾತನಾಡಿದರು. ರಾಷ್ಟ್ರೋತ್ಥಾನ ಪರಂಪರೆಯ ಸಮಗ್ರತೆಯನ್ನು ಶ್ಲಾಘಿಸಿದರು.  2023-24 ನೇ ಸಾಲಿನಲ್ಲಿ ಹತ್ತನೇಯ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ಆರು ವಿದ್ಯಾರ್ಥಿಗಳಿಗೆ ಸನ್ಮಾನಿಲಾಯಿತು. ಯೋಗ ಸ್ಪರ್ಧೆಯಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿ ಭಗವತ್ ಪ್ರಸಾದ್‌ನನ್ನು ಅಭಿನಂದಿಸಲಾಯಿತು.  ಶಾಲೆಯ ಸಂಚಾಲಕ ಶಂಭುಲಿಂಗಪ್ಪ, ಸಂಸ್ಥೆಯ ಕಾರ್ಯದರ್ಶಿ ಜಯಣ್ಣ, ಸದಸ್ಯೆ ಭಾರತಿ ಹೆಗಡೆ, ಬಳ್ಳಾರಿ ಶಾಲೆಯ ಪ್ರಾಚಾರ್ಯೆ ಸರಸ್ವತಿ, ಕೆರೂರು ಶಾಲೆಯ ಸಂಚಾಲಕ ರಮೇಶ್, ಪ್ರಾಚಾರ್ಯೆ ನೀಲಕಂಠೇಶ್ವರಿ ಇದ್ದರು.  ವೀಣಾ ಪ್ರಸಾದ್ ಮತ್ತು ವಿದ್ಯಾರ್ಥಿಗಳು ಪ್ರಾರ್ಥಿಸಿದರು. ವಾಗೀಶ್ ಮತ್ತು ವಿದ್ಯಾರ್ಥಿಗಳ ತಂಡದವರಿಂದ ತಬಲಾ ವಾದನ ನೇರವೇರಿತು. ಸ್ವಾಗತ ನೃತ್ಯವನ್ನು ವಿದ್ಯಾರ್ಥಿಗಳು ಮನೋಜ್ಞವಾಗಿ ನಡೆಸಿಕೊಟ್ಟರು.  ಕಾರ್ಯಕ್ರಮದ ನಿರೂಪಣೆಯನ್ನು ಅಮೃತಾ ಮಾಡಿದರು. ಮಂಜಳಾ ಸ್ವಾಗತಿಸಿದರು. ವಂದನಾರ್ಪಣೆಯನ್ನು ಹಾಲಸ್ವಾಮಿ ನೇರವೇರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net