ದೇಶಪ್ರೇಮ ಜಾಗೃತಿ ಅಗತ್ಯ

dvg-arts-college.jpg
Published on

ದಾವಣಗೆರೆ :  ನಮ್ಮ ದೇಶದ ತೀವ್ರ ಗತಿಯ ಪ್ರಗತಿಯನ್ನು ಕಂಡು ಹೊಟ್ಟೆಕಿಚ್ಚು ಪಡುತ್ತಿರುವ ನೆರೆಹೊರೆಯ ದೇಶಗಳು ಕುಯುಕ್ತಿಗಳಿಂದ ಅಭಿವೃದ್ಧಿಗೆ ಭಂಗ ತರುತ್ತಿವೆ. ನಾವು ದೇಶಪ್ರೇಮ ಜಾಗೃತವಾಗಿಸಿಕೊಂಡು ಅಂತಹ ಕುತಂತ್ರವನ್ನು ತಡೆಯಬೇಕಿದೆ ಎಂದು ದಾವಣಗೆರೆ ವಿವಿಯ ಕುಲಪತಿ ಪ್ರೊ.ಬಿ.ಡಿ.ಕುಂಬಾರ ಹೇಳಿದರು.  ನಗರದ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಗುರುವಾರ 78ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ನಾವು ರಾಷ್ಟ್ರೀಯ ಹಿತ ಕಾಯುವ ನಿಟ್ಟಿನಲ್ಲಿ ಪ್ರಾಮಾಣಿಕ ಹೆಜ್ಜೆ ಇಡೋಣ ಎಂದು ತಿಳಿಸಿದರು.  ಇದೇ ಸಂದರ್ಭದಲ್ಲಿ ದಾವಣಗೆರೆಯ ದೃಶ್ಯ ಕಲಾ ಮಹಾವಿದ್ಯಾಲಯ 60ನೇ ವರ್ಷದಲ್ಲಿ ಮುನ್ನಡೆಯುತ್ತಿರುವ ಪ್ರಯುಕ್ತ ಹಮ್ಮಿಕೊಳ್ಳಲು ಉದ್ದೇಶಿಸಿರುವ ವಜ್ರ ಮಹೋತ್ಸವ ಸಂಭ್ರಮದ ಲಾಂಛನವನ್ನು ಅನಾವರಣಗೊಳಿಸಿದರು.  ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಜೈರಾಜ ಚಿಕ್ಕ ಪಾಟೀಲ್, ಸಹಾಯಕ ಪ್ರಾಧ್ಯಾಪಕ ಡಾ.ಸತೀಶ್ ಕುಮಾರ್ ಪಿ.ವಲ್ಲೇಪುರೆ, ಬೋಧನಾ ಸಹಾಯಕರಾದ ಡಾ.ಸಂತೋಷ ಕುಲಕರ್ಣಿ, ಡಾ.ಗಿರೀಶ್ ಕುಮಾರ್, ದತ್ತಾತ್ರೇಯ ಭಟ್ಟ, ಡಿ.ಎಚ್. ಸುರೇಶ್, ಶಿವಶಂಕರ್ ಸುತಾರ್, ಹರೀಶ್ ಹೆಡ್ನವರ್, ಕೆ.ವಿ. ಪ್ರಮೋದ, ನವೀನ್ ಕುಮಾರ್, ಕಚೇರಿ ನೌಕರರಾದ ನಂದಕುಮಾರ್, ಶಿವಕುಮಾರ್, ರಮೇಶ್ ಇದ್ದರು.  ವಜ್ರ ಮಹೋತ್ಸವ ಸಂಭ್ರಮದ ಲಾಂಛನ ರಚನಾ ಸ್ಪರ್ಧೆಯಲ್ಲಿ ದೃಶ್ಯಕಲಾ ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿ ಹರೀಶ್ ಆಚಾರ್ ರಚಿಸಿದ ಲಾಂಛನ ಆಯ್ಕೆಯಾಗಿ ಅನಾವರಣಗೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net