ಮತದಾನ ಜಾಗೃತಿ ಮೂಡಿಸುವ ಪ್ರದರ್ಶನ

dvg-sankalana-09-1.jpg
Published on

ದಾವಣಗೆರೆ : ಸಂಕಲನ ಸಮೂಹ ಸಂಸ್ಥೆ ವತಿಯಿಂದ ಮತದಾನ ಜಾಗೃತಿ ಮೂಡಿಸುವ ಚಿತ್ರ, ಮೂರ್ತಿ, ಬರಹದ ಪ್ರದರ್ಶನವನ್ನು ನಗರದ ಎಂಸಿಸಿ ಬಿ ಬ್ಲಾಕ್‌ನ ಹಳೇ ಆರ್.ಟಿ.ಒ ಸರ್ಕಲ್ನಲ್ಲಿ ಹಮ್ಮಿಕೊಳ್ಳಲಾಗಿದೆ.
 ಮತದಾನ ಮಾಡುವ ಪ್ರತಿಜ್ಞಾವಿಧಿಯ ಬರಹ, ತೋರು ಬೆರಳಿನ ಶಿಲ್ಪ, ‘ಉತ್ತಮ ಭವಿಷ್ಯಕ್ಕಾಗಿ ಮತದಾನ ಮಾಡಲು ನಾನು ಸಿದ್ಧ, ಮತ್ತೆ ನೀವು?’ ಎಂದು ಅರಿವು ಮೂಡಿಸುವ ಬರಹವಿರುವ ಸೆಲ್ಫಿ ಕಾರ್ನರ್ ಪ್ರದರ್ಶನದಲ್ಲಿದೆ.
 ಕಲಾವಿದ ರವೀಂದ್ರ ಅರಳಗುಪ್ಪಿ ಮತ್ತು ಅವರ ಕುಟುಂಬದ ಇಂಪನ, ಉಷಾ ಕೈಜೋಡಿಸಿದ್ದಾರೆ. ಮಂಗಳವಾರ ಆರಂಭವಾಗಿರುವ ಈ ಪ್ರದರ್ಶನ ಬುಧವಾರವೂ ಇರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net