

ದಾವಣಗೆರೆ : ದಾವಣಗೆರೆ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ನಗರದ ಕುವೆಂಪು ಕನ್ನಡ ಭವನದ ಆವರಣದಲ್ಲಿ ಶನಿವಾರ ಬಯಲು ಕಲಾ ಪ್ರದರ್ಶನವನ್ನು ಆಯೋಜಿಸಲಾಗಿತ್ತು.
ಚಿತ್ರ ಕಲಾವಿದರಾದ ಎ. ಮಹಲಿಂಗಪ್ಪ, ಶಾಂತಯ್ಯ ಪರಡಿಮಠ, ಬಿ. ಅಚ್ಯುತಾನಂದ, ಕೆ.ಎಸ್. ಶಶಿಕುಮಾರ್ ಅವರು ರಚಿಸಿದ 40ಕ್ಕೂ ಹೆಚ್ಚು ಕಲಾಕೃತಿಗಳನ್ನು ಪ್ರದರ್ಶಿಸಲಾಯಿತು. ಆಸಕ್ತರು ಪ್ರದರ್ಶನ ಮಳಿಗೆಗೆ ಭೇಟಿ ನೀಡಿ ಚಿತ್ರಕಲೆಯನ್ನು ಆಸ್ವಾದಿಸಿದರು.
ಪ್ರದರ್ಶನವನ್ನು ಸಮ್ಮೇಳನದ ಸರ್ವಾಧ್ಯಕ್ಷ ಶಿವಾನಂದ ಗುರೂಜಿ ಉದ್ಘಾಟಿಸಿದರು. ಕಸಾಪ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ, ತಾಲೂಕು ಅಧ್ಯಕ್ಷೆ ಸುಮತಿ ಜಯಪ್ಪ, ಕಾರ್ಯದರ್ಶಿ ದಿಳ್ಳೆಪ್ಪ, ರಾಘವೇಂದ್ರ ನಾಯರಿ ಇದ್ದರು.
ಸಮ್ಮೇಳನದ ಅಂಗವಾಗಿ ಪುಸ್ತಕ ಮಳಿಗೆಗಳನ್ನು ವ್ಯವಸ್ಥೆಗೊಳಿಸಲಾಗಿತ್ತು. ಓದುಗರು ಪುಸ್ತಕಗಳನ್ನು ಖರೀದಿಸಿದರು.