ಕಲಾ ಪ್ರದರ್ಶನದಲ್ಲಿ ಆಕರ್ಷಿಸಿದ ಕಲಾಕೃತಿಗಳು

dvg-art.jpg
Published on

ದಾವಣಗೆರೆ: ರಾಜಸ್ತಾನ ಸಾಂಪ್ರದಾಯಿಕ ಕಲೆ, ನೂತನ ಮಾಧ್ಯಮ ಕಲೆ, ಪುಟ್ಟ ಶಿಲ್ಪಗಳು, ಗಾಜಿನ ವಿವಿಧ ವಿನ್ಯಾಸ ರಚನೆಗಳು, ಜಾನಪದೀಯ ಮಾದರಿಯ ಚಿತ್ತಾರಗಳ ಲಿಪನ್ ಆರ್ಟ್ ಕಲಾಕೃತಿಗಳು ಎಲ್ಲರನ್ನು ಆಕರ್ಷಿಸಿದವು.  ನಗರದ ದೃಶ್ಯ ಕಲಾ ಮಹಾವಿದ್ಯಾಲಯದ ನವೀಕೃತ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಮತ್ತು ಐಚ್ಛಿಕ ವಿಷಯಗಳ ಕಲಾ ಪ್ರದರ್ಶನದಲ್ಲಿ ಕಂಡುಬಂದ ಕಲಾಕೃತಿಗಳಿವು.  ವಿದ್ಯಾರ್ಥಿಗಳು ತಮ್ಮ ಆಸಕ್ತಿಯುತ ವಿಷಯ ಆಯ್ದುಕೊಂಡು ಮಹಾವಿದ್ಯಾಲಯದ ಆಯಾ ಐಚ್ಛಿಕ ವಿಷಯ ಬೋಧಕರ ಮಾರ್ಗದರ್ಶನದಲ್ಲಿ ಕಲಾಕೃತಿ ರಚಿಸಿದ್ದು, ಸುಮಾರು 50ಕ್ಕೂ ಅಧಿಕ ಕಲಾಕೃತಿಗಳು ಅಲ್ಲಿದ್ದವು.  ದೃಶ್ಯ ಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಜೈರಾಜ ಚಿಕ್ಕ ಪಾಟೀಲ ಕಲಾ ಪ್ರದರ್ಶನ ಉದ್ಘಾಟಿಸಿದರು. ಬೋಧನಾ ಸಹಾಯಕರಾದ ಡಾ. ಎಂ.ಕೆ. ಗಿರೀಶ್‌ಕುಮಾರ್ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ  ಚಾಲನೆ ನೀಡಿದರು.  ಬೋಧನಾ ಸಹಾಯಕರಾದ ಡಾ. ಸಂತೋಷ ಕುಮಾರ್ ಕುಲಕರ್ಣಿ , ರಂಗನಾಥ್ ಕುಲಕರ್ಣಿ, ಕೆ.ವಿ. ಪ್ರಮೋದ, ಎ.ನವೀನ್‌ಕುಮಾರ್, ಶಿವಶಂಕರ್ ಸುತಾರ್, ಡಿ.ಎಚ್. ಸುರೇಶ್, ಹರೀಶ್ ಹೆಡ್ನವರ್ ಇದ್ದರು. ದತ್ತಾತ್ರೇಯ ಎನ್. ಭಟ್ಟ ಪ್ರಾಸ್ತಾವಿಕ ಮಾತನಾಡಿದರು.  ಶಾರದಾ ಜಾವಗಲ್ ಪ್ರಾರ್ಥಿಸಿದರು. ಕೀರ್ತಿ ಸಂಗೂರ ಸ್ವಾಗತಿಸಿದರು. ನವ್ಯಾ ನಿರೂಪಿಸಿದರು. ರಾಧಿಕಾ ವಂದಿಸಿದರು.  

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net