

ದಾವಣಗೆರೆ : ಉತ್ತರ ಪ್ರದೇಶದ ಲಕ್ನೋದ ಸೇಠ್ ಎಂ.ಆರ್. ಜೈಪುರಿಯಾ ಗೋಲ್ ಕ್ಯಾಂಪಸ್‌ನಲ್ಲಿ ಈಚೆಗೆ ನಡೆದ 15ನೇ ನ್ಯಾಷನಲ್ ಫೀಲ್ಡ್ ಇಂಡೋರ್ ಆರ್ಚರಿ ಚಾಂಪಿಯನ್‌ಷಿಪ್‌ನಲ್ಲಿ ದಾವಣಗೆರೆಯ ಹೊರಟ್ಟಿ ಕ್ರೀಡಾ ಅಕಾಡೆಮಿ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಬಿ.ಎಂ. ವರ್ಷಿಣಿ ಬಂಗಾರ ಮತ್ತು ಬೆಳ್ಳಿಯ ಪದಕ, ಬಿ.ಬಿ. ಕವನಾ ಚಿನ್ನದ ಮತ್ತು ಕಂಚಿನ ಪದಕ, ಜಿ. ವೈಭವ್ ಬಂಗಾರದ ಪದಕ, ಪ್ರಥಮ್ ಬೆಳ್ಳಿಯ ಪದಕ ಮತ್ತು 2 ಕಂಚಿನ ಪದಕ ಹಾಗೂ ವೈಭವ ನಾಯಕ್ ಬೆಳ್ಳಿಯ ಪದಕ ಗಳಿಸಿದ್ದಾರೆ. ಮಕ್ಕಳ ಈ ಸಾಧನೆ ಬಗ್ಗೆ ತರಬೇತಿದಾರ ಎಚ್.ಎಸ್. ಅನಿಲ್ ಕುಮಾರ್ ಹರ್ಷ ವ್ಯಕ್ತಪಡಿಸಿದ್ದಾರೆ.