ಬಿ.ಕಲಪನಹಳ್ಳಿ ಅಂಗನವಾಡಿಗೆ ಸಂಸದೆ ಭೇಟಿ

DVG-PRABHA-17.jpg
Published on

 ದಾವಣಗೆರೆ: ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ತಾಲೂಕಿನ ಬಿ.ಕಲಪನಹಳ್ಳಿ ಗ್ರಾಮಕ್ಕೆ ಬುಧವಾರ ಭೇಟಿ ನೀಡಿದ್ದರು.  ಗ್ರಾಮಸ್ಥರು ಆಯೋಜಿಸಿದ್ದ ಗಣೇಶೋತ್ಸವದಲ್ಲಿ ಪಾಲ್ಗೊಂಡರು. ನಂತರ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದರು.  ಈ ವೇಳೆ ಅಂಗನವಾಡಿ ಕೇಂದ್ರದ ಸ್ವಚ್ಛ ಪರಿಸರ, ಉತ್ತಮ ವಾತಾವರಣದ ಮಧ್ಯೆ ಮಕ್ಕಳ ಕಲರವ ಕಂಡು ಮೆಚ್ಚುಗೆ ಸೂಚಿಸಿದರು.  ಅಂಗನವಾಡಿ ಕೇಂದ್ರದ ಮಾಹಿತಿ ಫಲಕ, ಮಕ್ಕಳ ಪರಿಕರ ಹಾಗೂ ಸ್ವಚ್ಛತೆ ಬಗ್ಗೆ ಶ್ಲಾಘಿಸಿದರಲ್ಲದೆ,  ಸಂದರ್ಶಕರ ದಿನಚರಿಯಲ್ಲಿ ಬರೆದು ಪ್ರಶಂಸೆ ವ್ಯಕ್ತಪಡಿಸಿದರು.  ಈ ವೇಳೆ ಗ್ರಾಮದ ಮುಖಂಡರು ಹಾಗೂ ಅಂಗನವಾಡಿ ಶಿಕ್ಷಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net