ಮೃತದೇಹಗಳನ್ನು ತಾಯ್ನಾಡಿಗೆ ತರಿಸಲು ಮನವಿ

dvg-candal-light-21.jpg
Published on

ದಾವಣಗೆರೆ : ಅಮೆರಿಕದಲ್ಲಿ ಸಾವಿಗೀಡಾದ ದಾವಣಗೆರೆ ಮೂಲದ ಇಂಜಿನಿಯರ್ ದಂಪತಿ ಮತ್ತು ಪುತ್ರನ ಮೃತದೇಹಗಳನ್ನು ತಾಯ್ನಡಿಗೆ ತರಿಸಲು ನೆರವಾಗಬೇಕು ಎಂದು ಮೃತರ ಕುಟುಂಬ ವರ್ಗದವರು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
 ಮೃತ ಯೋಗೇಶ್ ಅವರ ತಾಯಿ ಶೋಭಾ ಮತ್ತು ಕುಟುಂಬದ ಇತರರು ಬೆಂಗಳೂರಿನಲ್ಲಿ ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಈ ಕುರಿತು ಮನವಿ ಸಲ್ಲಿಸಿದರು.
 ಪುತ್ರ, ಸೊಸೆ ಹಾಗೂ ಮೊಮ್ಮಗ ಅಮೆರಿಕದಲ್ಲಿ ಮೃತಪಟ್ಟ ಘಟನೆಯ ಬಗ್ಗೆ ಸಿಎಂಗೆ ವಿವರಗಳನ್ನು ನೀಡಿದ ಶೋಭಾ ಅವರು ಕಣ್ಣೀರಿಟ್ಟರು. ಕುಟುಂಬದವರಿಗೆ ಸಾಂತ್ವನ ಹೇಳಿದ ಸಿದ್ದರಾಮಯ್ಯ, ಅಗತ್ಯ ನೆರವು ಒದಗಿಸುವುದಾಗಿ ಭರವಸೆ ನೀಡಿದರು. ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಅವರಿಗೆ ಸೂಚನೆ ನೀಡಿದರು.
 ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕು ಹಾಲೇಕಲ್ಲು ಗ್ರಾಮದವರಾದ ಯೋಗೇಶ್ ಹೊನ್ನಾಳ್, ಪತ್ನಿ ಪ್ರತಿಭಾ ಹೊನ್ನಾಳ್ ಮತ್ತು ಪುತ್ರ ಯಶ್ ಹೊನ್ನಾಳ್ ನಿಗೂಢವಾಗಿ ಮೃತಪಟ್ಟ ಪ್ರಕರಣ ಶುಕ್ರವಾರ ಬೆಳಕಿಗೆ ಬಂದಿತ್ತು. ಘಟನೆಯ ಬಗ್ಗೆ ಅಮೆರಿಕದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
 ...
 * ಮೊಂಬತ್ತಿ ಬೆಳಗಿಸಿ ಶ್ರದ್ಧಾಂಜಲಿ
 ಮೃತ ಇಂಜಿನಿಯರ್ ದಂಪತಿ ಮತ್ತು ಪುತ್ರನ ಆತ್ಮಕ್ಕೆ ಶಾಂತಿ ಕೋರಿ ಅಮೆರಿಕದ ಬಾಲ್ಟಿಮೋರ್ ಸಿಟಿಯಲ್ಲಿ ಭಾನುವಾರ, ಯೋಗೇಶ್ ವಾಸವಿದ್ದ ಪ್ರದೇಶದ ಸಾರ್ವಜನಿಕರು ಮತ್ತು ಸಹೋದ್ಯೋಗಿಗಳು ಶ್ರದ್ಧಾಂಜಲಿ ಸಲ್ಲಿಸಿದರು.
 ಮೃತರ ಭಾವಚಿತ್ರದ ಮುಂದೆ ಮೊಂಬತ್ತಿ ಬೆಳಗಿಸಿ ನಮನ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net