ಕೃತಕ ಬುದ್ಧಿಮತ್ತೆ ಕುರಿತು ಕಾರ್ಯಾಗಾರ

dvg-Ambika-Saxena.jpg
Published on

ದಾವಣಗೆರೆ : ಭವಿಷ್ಯದ ಉದ್ಯೋಗಕ್ಕಾಗಿ ಕೃತಕ ಬುದ್ಧಿಮತ್ತೆ (ಎಐ) ವಿಷಯದ ಕುರಿತು ಕಾರ್ಯಾಗಾರ ನಗರದ ಬಿಐಇಟಿ ಕಾಲೇಜಿನ ಪ್ಲೇಸ್‌ಮೆಂಟ್ ಸೆಮಿನಾರ್ ಹಾಲ್‌ನಲ್ಲಿ ಬುಧವಾರ ನಡೆಯಿತು.  ಎಸ್‌ಟಿಪಿಐ (ಹುಬ್ಬಳ್ಳಿ, ದಾವಣಗೆರೆ) ಹೆಚ್ಚುವರಿ ನಿರ್ದೇಶಕ ವಿ. ಶಶಿಕುಮಾರ್ ಮಾತನಾಡಿ, ಭವಿಷ್ಯದಲ್ಲಿ ಉದ್ಯೋಗ ಸೃಷ್ಟಿ ಹಾಗೂ ಕೆಲಸದ ನಿರ್ವಹಣೆಯಲ್ಲಿ ಎಐ ಪಾತ್ರ ಎಷ್ಟು ಮುಖ್ಯವಾಗುತ್ತದೆ ಎಂಬುದನ್ನು ವಿವರಿಸಿದರು.  ಇಂಟೆಲ್ ಕಂಪನಿಯ ಪ್ರೋಗ್ರಾಂ ಮ್ಯಾನೇಜರ್ ಅಂಬಿಕಾ ಸಕ್ಸೇನಾ ಕಾರ್ಯಾಗಾರ ನಡೆಸಿಕೊಟ್ಟರು. ಎಸ್‌ಟಿಪಿಐ, ಇಂಟೆಲ್ ಕಂಪನಿ ಹಾಗೂ ವಿಷನ್ ದಾವಣಗೆರೆ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಯುಬಿಡಿಟಿ, ಬಿಐಇಟಿ, ಜಿಎಂಐಟಿ ಹಾಗೂ ಜೈನ್ ಕಾಲೇಜುಗಳ ಪ್ರಾಧ್ಯಾಪಕರು ಭಾಗವಹಿಸಿದ್ದರು. ಗುರುವಾರ ನಡೆಯಲಿರುವ ಕಾರ್ಯಾಗಾರದಲ್ಲಿ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.  

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net