ಸ್ವ ನಿಧಿ ಯೋಜನೆ ಜಾಗೃತಿ

hawker.jpg
Published on

ದಾವಣಗೆರೆ : ಜಿಲ್ಲಾ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದಿಂದ ನಗರದ ಶಿವಯೋಗಿ ಮಂದಿರದಲ್ಲಿ ಮಂಗಳವಾರ ಪತ್ರಿಕಾ ವಿತರಕರಿಗೆ ಕೇಂದ್ರ ಸರ್ಕಾರದ ಸ್ವ ನಿಧಿ ಯೋಜನೆ ಕುರಿತು ಜಾಗೃತಿ ಕಾರ್ಯಕ್ರಮ ನಡೆಯಿತು.
 ಪಾಲಿಕೆಯ ಅಧಿಕಾರಿ ವಿರುಪಾಕ್ಷಗೌಡ ಮಾತನಾಡಿ, ಬೀದಿಬದಿ ವ್ಯಾಪಾರಿಗಳಿಗೆ ಮಾತ್ರ ಸೀಮಿತವಾಗಿದ್ದ ಸ್ವ ನಿಧಿ ಯೋಜನೆಯನ್ನು ಇತ್ತೀಚೆಗೆ ಸೂರ್ಯ ಉದಯಿಸುವ ಮೊದಲೇ ತಮ್ಮ ಕಾಯಕದಲ್ಲಿ ತೊಡಗುವ ಪತ್ರಿಕಾ ವಿತರಕರಿಗೂ ಕಲ್ಪಿಸಲಾಗಿದೆ ಎಂದು ತಿಳಿಸಿದರು.
 ಪಾಲಿಕೆಗೆ ಒಳಪಡುವ ಎಲ್ಲ ಪತ್ರಿಕಾ ವಿತರಕರು ಯೋಜನೆಯಲ್ಲಿ ತಮ್ಮ ಹೆಸರು ನೋಂದಾಯಿಸಿ ಸರ್ಕಾರದ ಸಾಲ ಸೌಲಭ್ಯ ಪಡೆಯಬೇಕು. ವಿವಿಧ ಕಂತುಗಳಲ್ಲಿ 10 ರಿಂದ 50 ಸಾವಿರ ರೂ.ವರೆಗೆ ಸಾಲಸೌಲಭ್ಯ ದೊರೆಯಲಿದ್ದು, ಸಕಾಲಕ್ಕೆ ಮರುಪಾವತಿಸಿದರೆ ಮುಂದಿನ ಸಾಲ ಸೌಲಭ್ಯಕ್ಕೆ ಅರ್ಹರಾಗುತ್ತಾರೆ ಎಂದರು.
 ಅಧಿಕಾರಿ ವೈ.ಸಿ. ಶ್ರುತಿ, ಸಮುದಾಯ ಸಂಪನ್ಮೂಲ ವ್ಯಕ್ತಿಗಳಾದ ಜ್ಯೋತಿ ಎಂ. ದೊಡ್ಮನೆ, ಆರತಿ ರಮೇಶ್, ಸಂಘದ ಅಧ್ಯಕ್ಷ ಎ. ಚಂದ್ರು, ಅರುಣ್ ಕುಮಾರ್, ನಿಂಗಪ್ಪ, ಎಂ.ಬಿ. ಬಸವರಾಜ, ನಾಗರಾಜ, ರಮೇಶ್ ಜೆ. ವತನ್, ದಿನೇಶ್ ಶೆಟ್ಟಿ, ಕುಮಾರಸ್ವಾಮಿ, ಕೃಷ್ಣಮೂರ್ತಿ, ಗಂಗಾಧರ,  ಮಂಜುನಾಥ್, ರಘು  ಸುಧಾಕರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net