ಯಾವುದೇ ಪಾತ್ರಕ್ಕೂ ಸೈ

dvg-savithri-rangabhumi.jpg
Published on

   ದಾವಣಗೆರೆ: ಸುವರ್ಣ ಕರ್ನಾಟಕ ಪ್ರಶಸ್ತಿಗೆ ಆಯ್ಕೆಯಾಗಿರುವ ಸಾವಿತ್ರಿ ರಿತ್ತಿ ರಂಗಭೂಮಿ ಹಿನ್ನೆಲೆಯ ಕುಟುಂಬದವರು. ಮೂರು ತಲೆಮಾರುಗಳ ಕಲಾವಿದ ಪರಂಪರೆಯಲ್ಲಿ ಬಂದವರು. ವೃತ್ತಿ ರಂಗಭೂಮಿ ಕಲಾವಿದೆಯಾಗಿ ವಿವಿಧ ನಾಟಕ ಕಂಪನಿಗಳಲ್ಲಿ 4 ದಶಕಗಳಿಂದ ಅಭಿನಯಿಸುತ್ತ ಬಂದಿದ್ದಾರೆ.  ಪ್ರಸ್ತುತ ದಾವಣಗೆರೆಯ ಶ್ರೀರಾಮ ನಗರದಲ್ಲಿ ನೆಲೆಸಿರುವ ಸಾವಿತ್ರಿ ರಿತ್ತಿ ಅವರು ಮೂಲತಃ ಹಾವೇರಿ ಜಿಲ್ಲೆ ಹೊಸರಿತ್ತಿಯವರು. ಅಜ್ಜ ಹಾನಗಲ್ ಬಾಬುರಾವ್, ತಾಯಿ ತಾರಾಬಾಯಿ ರಿತ್ತಿ ಮತ್ತು ತಂದೆ ರಾಮಣ್ಣ ರಿತ್ತಿ ಇಬ್ಬರೂ ಗದಗ ನಾಟಕ ಕಂಪನಿಯಲ್ಲಿ ಕಲಾವಿದರಾಗಿದ್ದರು.  ಸಾವಿತ್ರಿ ರಿತ್ತಿ ಬಣ್ಣ ಹಚ್ಚಿದ್ದು ಅವರ 15ನೇ ವಯಸ್ಸಿನಲ್ಲಿ. ಬಿ.ಆರ್. ಅರಿಷಿಣಗೋಡಿ ಕಂಪನಿ, ಚಿಂದೋಡಿ ಲೀಲಾ ಅವರ ಕೆಬಿಆರ್ ಡ್ರಾಮಾ ಕಂಪನಿ, ಚಿತ್ರದುರ್ಗದ ಶ್ರೀ ಕುಮಾರೇಶ್ವರ ನಾಟ್ಯ ಸಂಘ ಸೇರಿದಂತೆ ವಿವಿಧ ನಾಟಕ ಕಂಪನಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ನಾಯಕಿಯ ಪಾತ್ರದಲ್ಲಿ ಮಿಂಚಿದ್ದಾರೆ, ಹಾಸ್ಯ ನಟನೆ, ವಿಲನ್ ಪಾತ್ರದಲ್ಲೂ ಸೈ ಎನಿಸಿಕೊಂಡವರು. ಈಗಲೂ ಅವರು ನಟನೆಯ ನಂಟು ಬಿಟ್ಟಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net